ಈಗ ನಳಿನ್‌ ಕುಮಾರ್ ಕಟೀಲ್  ಸಿಡಿ ಅಸಲಿ ನಕಲಿ ವಿಷಯ ಹಾಗಿರಲಿ. ಸುಮ್ಮನೆ ಗೊಂದಲ ಮಾಡುವ ಬದಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಉಳಿಯುತ್ತಾರೋ ಸ್ಪಷ್ಟ ಪಡಿಸಲಿ ಎಂದು ಮಾಜೀ ಸಚಿವ ಯು. ಟಿ. ಖಾದರ್ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದ ಕಡಲ ಭಾಗದ ಎಲ್ಲ ರಸ್ತೆಗಳು ಕಡಲ ಕೊರೆತಕ್ಕೆ ಬಲಿಯಾಗಿವೆ. ಆಳುವವರು, ಅಧಿಕಾರಿಗಳಿಗೆ ಎಷ್ಟು ಹೇಳಿದರೂ ಕಣ್ಣೂ ಕಾಣುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ ಎಂದು ಅವರು ಹೇಳಿದರು.