2008ರಲ್ಲಿ ಡೊಲೆರಾ ಎಂಬ ಗಿಫ್ಟ್ ಸಿಟಿ ನಿರ್ಮಿಸುವುದಾಗಿ 3ಡಿ ವೀಡಿಯೋ ತೋರಿಸಿ ಮೋದಿಯವರು ಪ್ರಚಾರ ಪಡೆದಿದ್ದರು. ಆ ಮುಗಿಯದ ನಗರ ನೋಡಲು ಸಚಿವ ಜಗದೀಶ್ ಶೆಟ್ಟರ್ ನಮ್ಮ ರಾಜ್ಯದ ತೆರಿಗೆ ಹಣ ಏಕೆ ವ್ಯಯಿಸಬೇಕು ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೇಳ್ಕೆ‌ ಎಸೆದಿದ್ದಾರೆ.

ಮೋದಿ ಇಂದ್ರ ಲೋಕ ಭೂಮಿಗೆ ಇಳಿಸಿದ್ದಾರೆ ಎಂದು ಮಾಧ್ಯಮಗಳು ಪ್ರಚಾರ ನೀಡಿದ್ದವು. ಅಲ್ಲಿ ಕೆಲಸ ನಡೆದಿರುವುದು ನೋಡಿದರೆ ಅದು ಮುಗಿಯಲು ಇನ್ನೂ ನೂರು ವರುಷ ಬೇಕು. ಅದನ್ನು ಯಾವ ಗುಜರಾತ್ ಮಾದರಿ ಎಂದು ನೋಡಲು ಮಂತ್ರಿ ಶೆಟ್ಟರ್ ಹೋಗುತ್ತಿದ್ದಾರೆ. ಸುಮ್ಮನೆ ಇಲ್ಲದ ಡೊಲೆರಾವನ್ನು ವೀಡಿಯೋದಲ್ಲೇ ನೋಡಿ ನಮ್ಮ ತೆರಿಗೆ ಹಣವನ್ನು ನಮ್ಮ ನಗರ ನಿರ್ಮಾಣಕ್ಕೆ ವ್ಯಯಿಸಲಿ ಎಂದು ಎಚ್. ಡಿ. ಕುಮಾರಸ್ವಾಮಿ ಕಾರವಾಗಿ ಹೇಳಿದರು.