ಎಸ್. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 95 ಶೇಕಡಾ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ. ಬಿಜೆಪಿ ಸರಕಾರ ಯಾವ ಆಶ್ವಾಸನೆ ಈಡೇರಿಸಿದೆ? ನಳಿನ್ ಕುಮಾರ್ ಕಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಪಕ್ಷದ ಪ್ರವಾಸ ವೇಳೆ ಡಿ. ಕೆ. ಶಿವಕುಮಾರ್ ಅವರನ್ನು ಪತ್ರಕರ್ತರು ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್ ಅವರು ಸಿದ್ದರಾಮಯ್ಯರನ್ನು ಟೀಕಿಸಿದ ಬಗೆಗೆ ಪ್ರಶ್ನಿಸಿದಾಗ ಅವರು ಹೀಗಂದರು.

ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ ಸರಕಾರ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಸರಕಾರಗಳು ಕೊನೆಯ ಸ್ಥಾನದಲ್ಲಿವೆ. ಈಗ ಬಿಜೆಪಿಯದು ಮ್ಯೂಸಿಕಲ್ ಚೇರ್ ಸರಕಾರ ಎಂದು ಡಿಕೆಶಿ ಹೇಳಿದರು.