ಉತ್ತರ ಭಾರತದ ಟ್ಯೂಶನ್ ಮಾಫಿಯಾಗಳು ನಿರ್ವಹಿಸುತ್ತಿರುವ ನೀಟ್ ಪರೀಕ್ಷೆಯಿಂದ ಅರ್ಹತೆ ಇರುವವರಿಗೆ ಸೀಟು ಸಿಗದೆ ಕಳ್ಳ ಹಣ ನೀಡುವವರಿಗೆ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಮಾರಲಾಗುತ್ತಿದೆ ಎಂದು ರಾಜ್ಯದ ಎಲ್ಲ ಕಡೆ ಪ್ರತಿಭಟನೆ ಪ್ರಾರಂಭವಾಗಿದೆ.
ಉಕ್ರೇನಿನಲ್ಲಿ ಸತ್ತ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ 97 ಶೇಕಡಾ ಅಂಕ ಪಡೆದರೂ ಇಲ್ಲಿ ಸೀಟಿಗೆ ಕೋಟಿ ರೂಪಾಯಿ ಕೇಳಿದರು ಎಂದು ವಿದ್ಯಾರ್ಥಿಯ ತಂದೆ ಹೇಳಿದ ಮೇಲೆ ಈ ಪ್ರತಿಭಟನೆ ತೀವ್ರವಾಗಿದೆ.
ದೇಶದಲ್ಲಿ 289 ಸರಕಾರಿ ಮತ್ತು 269 ಕಾಸಗಿ ಎಂದು 558 ಮೆಡಿಕಲ್ ಕಾಲೇಜುಗಳು ಇವೆ. ಇವುಗಳಲ್ಲಿ 83,275 ಎಂಬಿಬಿಎಸ್ ಮತ್ತು 42,702 ಸ್ನಾತಕೋತ್ತರ ಸೀಟುಗಳು ಇವೆ. ನೀಟ್ ಮೋಸದ ಬಗೆಗೆ ತಮಿಳುನಾಡು ಸರಕಾರ ತೀವ್ರ ಪ್ರತಿಭಟನೆ ನಡೆಸಿದೆ. ಕರ್ನಾಟಕದಲ್ಲಿ ಈ ಹೋರಾಟ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ.