ಯುದ್ಧ ಪೀಡಿತ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ತೀವ್ರ ಗಾಯಗೊಂಡ ಒಬ್ಬ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಂತ್ರಿ ವಿ. ಕೆ. ಸಿಂಗ್ ಹೇಳಿದರು.
ಕರ್ನಾಟಕ ಮತ್ತು ಪಂಜಾಬಿನ ಇಬ್ಬರು ವಿದ್ಯಾರ್ಥಿಗಳು ಶೆಲ್ ದಾಳಿಗೆ ಸಿಲುಕಿ ಸತ್ತ ಮೇಲೆ ಭಾರತೀಯ ಸರಕಾರ ಮತ್ತು ರಾಯಭಾರಿ ಕಚೇರಿಯು ಸುರಕ್ಷಿತ ಮತ್ತು ಕಡಿಮೆ ದೂರದ ಮಾರ್ಗಗಳನ್ನು ಭಾರತೀಯರಿಗೆ ಹೊಂದಿಸಿ ಕೊಡುವಂತೆ ಕೇಳಿಕೊಂಡಿದೆ.