ಜಿಸಿಸಿ- ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಮೇಯರ್ ಅಭ್ಯರ್ಥಿಯಾಗಿ ಡಿಎಂಕೆ ಪಕ್ಷವು ಆರ್. ಪ್ರಿಯಾ ಅವರನ್ನು ಆರಿಸಿದೆ.
28 ವರುಷದ ಮಹಿಳೆಯಾದ ಇವರು ಅತಿ ಕಡಿಮೆ ಪ್ರಾಯದ ಮೊದಲ ದಲಿತ ಮೇಯರ್ ಆಗಿದ್ದಾರೆ. ಡಿಎಂಕೆ ಕಾಂಗ್ರೆಸ್ ಮೈತ್ರಿ ಕೂಟವು 200 ಸದಸ್ಯ ಬಲದ ಜಿಸಿಸಿಯಲ್ಲಿ 184 ಸದಸ್ಯ ಬಲ ಹೊಂದಿದ್ದು, ಅದರಲ್ಲಿ 153 ಸದಸ್ಯರು ಡಿಎಂಕೆ- ದ್ರಾವಿಡ ಮುನ್ನೇಟ್ರ ಕಳಗಂನವರೇ ಆಗಿರುವುದರಿಂದ ಮೇಯರ್ ಎಂದು ಪ್ರಿಯಾರ ಆಯ್ಕೆ ಸಾಂಪ್ರದಾಯಿಕವಾಗಿ ಘೋಷಣೆ ಆಗಬೇಕು ಅಷ್ಟೆ.