ಜಾರ್ಖಂಡ್ ಮೂಲದ ಧಾರಾವಾಹಿ ನಟಿ ರಿಯಾ ಕುಮಾರಿ ಅವರನ್ನು ಬುಧವಾರ ಬೆಳಿಗ್ಗೆ 6 ಗಂಟೆಗೆ ಹತ್ತಿರದಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಹೌಡಾ ಪೋಲೀಸರು ಗಂಡನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ರಿಯಾ ಅವರು ಮೂರು ವರುಷದ ಮಗಳು ಮತ್ತು ಗಂಡನೊಂದಿಗೆ ರಾಂಚಿಯಿಂದ ಕೊಲ್ಕತ್ತಾಕ್ಕೆ ಹೈವೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಮುಂಜಾನೆ 6 ಗಂಟೆ ಹೊತ್ತಿಗೆ ಹೌರಾ ಹೊರ ವಲಯದ ಮಹೀಶ್ ರೇಖಾ ಬಳಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದಾರೆ. ಮೂವರು ದರೋಡೆಕೋರರು ರಿಯಾಳನ್ನು ಸುತ್ತುವರಿದಾಗ ಆಕೆ ಪ್ರತಿಭಟಿಸಿದ್ದಾಳೆ. ಅವರು ಆಕೆಗೆ ಗುಂಡು ಹಾರಿಸಿ ಹಣ, ಒಡವೆ ಇದ್ದ ಆಕೆಯ ಕಯ್ಬ್ಯಾಗು ಕಸಿದುಕೊಂಡು ಓಡಿದ್ದಾರೆ.

ಗಂಡ ಪ್ರಕಾಶ್ ಕುಮಾರ್ ನೀಡಿರುವ ಹೇಳಿಕೆಯಿದು. ಹೌರಾ ಪೋಲೀಸರು ಅದನ್ನು ನಂಬಲು ತಯಾರಿಲ್ಲ. ವಿಚಾರಣೆ, ತನಿಖೆ ನಡೆದಿದೆ.