ಕೃಷ್ಣಾಪುರದ ವ್ಯಾಪಾರಿ ಜಲೀಲ್ ಕೊಲೆಯ ರೂವಾರಿ ಮುಖ್ಯ ಆರೋಪಿ ಕೃಷ್ಣಾಪುರ 4ನೇ ಬ್ಲಾಕಿನ‌ ಲಕ್ಷ್ಮೀಶ ದೇವಾಡಿಗನನ್ನು ಬಂಧಿಸಿದ್ದು, ಆರೋಪಿಯನ್ನು ವಿಚಾರಣೆಗಾಗಿ 14 ದಿನಗಳ ಪೋಲೀಸು ಕಸ್ಟಡಿಗೆ ಪಡೆಯಲಾಗಿದೆ.

ಲಕ್ಷ್ಮೀಶ ದೇವಾಡಿಗ

Image Courtesy

ಕೊಲೆಯ ಸ್ಕೆಚ್ ಹಾಕಿದವನು ಈತ ಎಂದು ಪೋಲೀಸು ಮೂಲಗಳು ತಿಳಿಸಿವೆ. ಕಳೆದ ವಾರ ಜಲೀಲ್‌ರ ಅಂಗಡಿಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ಧ ಈತ ಆಮೇಲೆ ಕೊಲೆಯ ರೂಪು ರೇಖೆ ಹಾಕಿದ್ದ.

ಪಣಂಬೂರು ಮತ್ತು ಸುರತ್ಕಲ್ ಪೋಲೀಸು ಠಾಣೆಗಳಲ್ಲಿ ರೌಡಿ ಶೀಟರ್ ಆಗಿರುವ ಲಕ್ಷ್ಮೀಶ ದೇವಾಡಿಗ ಪಿಂಕಿ ನವಾಜ್ ಕೊಲೆಯ ಆರೋಪಿ ಆಗಿದ್ದ. 

ಜಲೀಲ್ ಕೊಲೆಯ ಸಂಬಂಧ ಇಲ್ಲಿಯವರೆಗೆ ನಾಲ್ವರ ಬಂಧನ ಆಗಿದೆ. ಒಬ್ಬ ಮಹಿಳೆ ಸಹಿತ ಕೆಲವರ ವಿಚಾರಣೆ ನಡೆದಿದೆ.