ಕಟೀಲು: ಸಂಭ್ರಮವೆಂದರೆ ಕೇವಲ ಪಟಾಕಿ ಹೊಡೆದು ಅಥವಾ ಇತರ ಆಚರಣೆ ಮಾಡುವುದಲ್ಲ ಬದಲಿಗೆ ನಾವು ಮಾಡುವ ಕೆಲಸ ದೇವರಿಗೆ ಮೆಚ್ಚುವಂತಹ ಆಗಬೇಕು ಎಂದು ಪರಮಪೂಜ್ಯ ಅತೀ ವಂದನೀಯ ಧರ್ಮ ಗುರುಗಳಾದ ಡಾ. ಪೀಟರ್ ಪೌಲ್ ಸಲ್ದಾನ ಧರ್ಮಧ್ಯಕ್ಷರು ಮಂಗಳೂರು ಧರ್ಮ ಪ್ರಾಂತ್ಯ ಅವರು ಹೇಳಿದರು.



ಅವರು ಡಿಸೆಂಬರ್ 29 ರಂದು ನಡೆದ ಕಟೀಲು ಸಂತ ಜಾಕೋಬರ ದೇವಾಲಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ದಿವ್ಯ ಬಲಿ ಪೂಜೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುದ ಪರಮಪೂಜ್ಯ ಅತಿ ವಂದನೀಯ ಧರ್ಮ ಗುರುಗಳಾದ ಡಾ. ಪೀಟರ್ ಪೌಲ್ ಸಲ್ದಾನ ಧರ್ಮಧ್ಯಕ್ಷರು ಮಂಗಳೂರು ಧರ್ಮ ಪ್ರಾಂತ್ಯ. ನಾವು ಮಾಡುವ ಸಮಾರಂಭವು ಕೇವಲ ಪಟಾಕಿ ಹೊಡೆದು ಅಥವಾ ಇತರ ಆಚರಣೆ ಮಾಡುವುದರ ಬದಲಿಗೆ ನಾವು ಮಾಡುವ ಕೆಲಸ ದೇವರಿಗೆ ಮೆಚ್ಚುವಂತಹ ಆಗಬೇಕು ಮತ್ತು ಪರಸ್ಪರ ಹೊಂದಾಣಿಕೆ ಮತ್ತು ಶಾಂತಿ ಸಮಾಧಾನದಿಂದ ಇನ್ನೊಬ್ಬರ ಕಷ್ಟಕ್ಕೆ ಸಹಾಯ ಮಾಡಿದ್ದಾಗ ನಿಜವಾದ ಅರ್ಥ ಬರುತ್ತದೆ ಹಾಗೂ ಈ ಸಮಾರಂಭ ಯಶಸ್ವಿ ಆಗುತ್ತದೆ ಎಂದರು.





ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಧಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ವಂದನೀಯ ಫಾದರ್ ಓಸ್ವಾಲ್ಡ್ ಮೊಂತೇರೊ, ಫಾದರ್ ರೊನಾಲ್ಡ್ ಕುಟಿನ್ನೋ, ಫಾದರ್ ಸ್ಟ್ಯಾನಿ ಮೊಂತೇರೊ, ಫಾದರ್ ಮೈಕಲ್ ಮಸ್ಕರೇನ್ಹಸ್, ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಂತಿ ಸಲ್ದಾನ ಕಾರ್ಯದರ್ಶಿ ನವೀನ್ ತಾವ್ರೊ, ಹೊಸದಾಗಿ ಆಯ್ಕೆಯಾದ ಪಾಲನ ಮಂಡಳಿಯ ಉಪಾಧ್ಯಕ್ಷರು ಬಲ್ಚರ್ ಮಸ್ಕರೇನ್ಹಸ್, ಕಾರ್ಯದರ್ಶಿ ವಿನ್ನಿ ಪಿಂಟೋ ಮತ್ತಿತರರು ಉಪಸ್ಥಿರಿದ್ದರು.





ಕಾರ್ಯಕ್ರಮದಲ್ಲಿ ಫಾದರ್ ಮೈಕಲ್ ಮಸ್ಕರೇನ್ಹಸ್ ಅವರು ಸ್ವಾಗತಿಸಿ ಮತ್ತು ನವೀನ್ ತಾವ್ರೊ ಅವರು ಧನ್ಯವಾದಗಳು ಹೇಳಿದರು, ಕಾರ್ಯಕ್ರಮವನ್ನು ಅಲೆಕ್ಸ್ ತಾವ್ರೊ ಅವರು ನಿರೂಪಿಸಿದರು.