ಕೃಷಿಸಿರಿ ರಾಜ್ಯ ಕೃಷಿ ಸಮ್ಮೇಳನ ಇದರ ಪ್ರಯುಕ್ತವಾಗಿ ಭವಿಷ್ಯದ ಬದುಕಿಗಾಗಿ ಮಣ್ಣನ್ನು ಉಳಿಸಿ ಎಂಬ ಚಳುವಳಿಯ ಅಂಗವಾಗಿ ಈ ದಿನ ತಣ್ಣೀರುಬಾವಿ ಬೀಚಿನಲ್ಲಿ ಜರುಗಿದ ಮರುಳ ಮೇಲಿನ ಶಿಲ್ಪ ಕಲಾ ಪ್ರದರ್ಶನ ವನ್ನ ಮಂಗಳೂರು ವಿವಿ ಯ ಉಪ ಕುಲಪತಿ,ಡಾ ಪಿ ಎಸ್ ಯಡಪಾಡಿತ್ತಾಯ,ima ಮಂಗಳೂರು ಅಧ್ಯಕ್ಷರಾದ ಡಾ ಸತ್ಯಮೂರ್ತಿ ಐತಾಳ್,ದಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಶ್ರೀ ಶ್ರೀನಿವಾಸ್ ನಾಯಕ್ ಇಂದಾಜೆ ಸೇರಿ ಜಂಟಿಯಾಗಿ ಉದ್ಘಾಟಿಸಿ ಮಣ್ಣು ಮತ್ತು ಭೂಮಿ ಈ ಜಗತ್ತಿನ ಎಲ್ಲಾ ರೀತಿಯ ಸಂಪತ್ತುಗಳ ಮೂಲ, ಮಣ್ಣು ಇಲ್ಲದಿರೇ ಜಗತ್ತಿನಲ್ಲಿ ಮಾನವ ಸೇರಿದಂತೆ ಜೀವ ಜಗತ್ತು ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು, ನಾವೆಲ್ಲರೂ ಮಣ್ಣನ್ನ ಉಳಿಸಲು ಪ್ರಯತ್ನ ಪಡಲೇ ಬೇಕು ಎಂಬ ಕರೆ ಕೊಟ್ಟರು.
ಕೃಷಿ ಸಿರಿ ರಾಜ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಜೊತೆ ಸಮಿತಿಯ ಅನ್ಯಾನ್ಯ ಜವಾಬ್ದಾರಿ ಹೊತ್ತ ಪದಾಧಿಕಾರಿಗಳಾದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು, ಚಂದ್ರಹಾಸ್ ಕುಂದರ್,ಪ್ರಶಾಂತ್ ಪೈ, ಜಗದೀಶ್ ಪೈ,ದಿನೇಶ್ ಕೊಲ್ನಾಡು, ಸುಧಾಕರ್ ಸಾಲ್ಯಾನ್, ಸಂತೋಷ್ ಕುಮಾರ್ ಕವತ್ತೂರು, ಸಂತೋಷ್ ಪುತ್ರನ್, ಸುಮಿತ್ರಾ ಶೆಟ್ಟಿ, ರೇವತಿ ಕುಂದರ್,ಜೊತೆ ವಿನಯ ಕೃಷಿ ಬಳಗ, ಪ್ರಣವ ಸೌಹಾರ್ದ ಬ್ಯಾಂಕ್, ಲಯನ್ಸ್ ಕ್ಲಬ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸ್ವಯಂಸೇವಕರು ಉಪಸ್ಥಿತರಿದ್ದರು.
ಭವಿಷ್ಯದ ಬದುಕಿನ ಜೀವಾಳ ಆದ ಮಣ್ಣು ಉಳಿಸಿ ಎಂಬ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಪ್ರಾಯೋಜಿಸಿದ ಮರಳು ಶಿಲ್ಪಾ ಕಲಾ ಚಳುವಳಿ ಗೆ ಮರಳು ಶಿಲ್ಪ ಕಲಾವಿದರಾದ ಪ್ರಸಾದ್ ಮೂಲ್ಯ ಸುರತ್ಕಲ್, ರಾಕೇಶ್ ರೈ ಮತ್ತು ಕಿರಣ್ ಕೈ ಜೋಡಿಸಿದ್ದರು. ಯೋಜಕ ತಣ್ಣೀರು ಬಾವಿ ಯವರು ಸಹಕರಿಸಿದ್ದರು.