ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ಮೇಲೆ ಹಣ ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮೊರಾದಾಬಾದ್ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮೊರಾದಾಬಾದಿನ ಕತ್ಘರ್ ಪೋಲೀಸು ಠಾಣೆ ವ್ಯಾಪ್ತಿಯ ಪ್ರಮೋದ್ ಶರ್ಮಾ ಎನ್ನುವವರು ಸೋನಾಕ್ಷಿ ಸಿನ್ಹಾ ಅವರನ್ನು ದೆಹಲಿಯ ಒಂದು ಕಾರ್ಯಕ್ರಮಕ್ಕೆ ನಿಗದಿಪಡಿಸಿ, ಅದಕ್ಕೆ ರೂ. 37 ಲಕ್ಷ ರೂಪಾಯಿ ಕೊಟ್ಟುದಾಗಿ ದೂರು. ನಟಿ ಕಾರ್ಯಕ್ರಮಕ್ಕೆ ಗೈರು ಹಾಜರು ಆದುದಲ್ಲದೆ ಹಣ ವಾಪಾಸು ನೀಡಿಲ್ಲ ಎಂಬುದು ಆರೋಪ. ನ್ಯಾಯಾಲಯಕ್ಕೆ ಕೂಡ ನಟಿ ಹಾಜರಾಗದ್ದರಿಂದ ಈಗ ಜಾಮೀನಿಲ್ಲದ ವಾರಂಟ್ ಜಾರಿಯಾಗಿದೆ.