ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಲೋಕ ಪ್ಯಾರಾ ಶೂಟಿಂಗ್‌ನಲ್ಲಿ ಭಾರತದ ಅವನಿ ಲೇಖರಾ ಎರಡನೆಯ ಚಿನ್ನ ಗೆದ್ದು ಸಾಧನೆ ಮಾಡಿದರು.
50 ಮೀಟರ್ ರೈಫಲ್ 3 ಪೊಸೀಶನ್‌ನಲ್ಲಿ ಅವನಿ 458.3 ಅಂಕ ಸಂಪಾದಿಸಿ ಕನಕ ಜಯಿಸಿದರು. ಸ್ಲೋವಾಕಿಯಾದ ವೆರೋನಿಕಾ ವೊಡೋವಿಕೋವ್ ಮತ್ತು ಸ್ವೀಡನ್‌ನ ಅನ್ನಾ ನಾರ್ಮನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು. ಅವನಿ ಈ ಶೂಟಿಂಗ್ ಸ್ಪರ್ಧೆಯ ಮೊದಲ ದಿನ ಒಂದು ಚಿನ್ನ ಗೆದ್ದಿದ್ದರು.