ಕುವೈತ್‌ನಲ್ಲಿ ವಲಸಿಗರು ಪ್ರತಿಭಟನೆ ನಡೆಸುವಂತಿಲ್ಲ. ಶುಕ್ರವಾರ ಫವಾಹೀಲ್‌ನಲ್ಲಿ ಪ್ರವಾದಿ ನಿಂದನೆ ವಿರುದ್ಧದ ಪ್ರತಿಭಟನೆಯಲ್ಲಿ ಹಲವರು ವಲಸೆಗಾರರು ಭಾಗವಹಿಸಿದ್ದು ಅವರನ್ನು ಗುರುತಿಸಿ ಗಡಿಪಾರು ಮಾಡಲು ಸೂಚಿಸಲಾಗಿದೆ.
ಈ ಬಗೆಗೆ ಅರಬ್ ಟೈಮ್ಸ್ ವರದಿ ಪ್ರಕಟಿಸಿದ್ದು, ಪೋಲೀಸರು ಈಗ ಫೋಟೋ ಮತ್ತು ವೀಡಿಯೋ ಮೂಲಕ ವಲಸೆಗಾರರನ್ನು ಗುರುತಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದಿದೆ.