ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಸರಕಾರಿ ಉನ್ನತೀಕರಿಸಿದ ಶಾಲಾ ಸಾಂಸ್ಕೃತಿಕ ಐಸಿರಿ ದಶಂಬರ 28 ರಂದು ನಡೆಯಲಿದೆ. ಬೆಳಿಗ್ಗೆ ಗಂ.9 ಕ್ಕೆ ಧ್ವಜಾರೋಹಣ, ಸಂಜೆ 4 ಕ್ಕೆ ಹೈಕೋರ್ಟ್ ವಕೀಲ ರಕ್ಷಿತ್ ಶಿವರಾಂ ಅಧ್ಯಕ್ಷತೆಯಲ್ಲಿ ಶಾಲಾ ಸಾಂಸ್ಕೃತಿಕ ಐಸಿರಿ ಕಾರ್ಯಕ್ರಮ ಪ್ರಾರಂಭ. ಶಾಸಕರು, ಅಧಿಕಾರಿಗಳು, ಊರ ಪ್ರಮುಖರು, ಹಳೆ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಕೆ. ಸುಶೀಲ, ಹಳೆ ವಿದ್ಯಾರ್ಥಿ ಪುರಂದರ ತಿಳಿಸಿದರು.