ಭುವಿಯಲ್ಲಿ ಭಾತೃತ್ವದ ಹಿರಿಮೆ ಸಾರುವ ಸಂಬಂಧ

ಭಾವನೆಗಳ ಬಾಂಧವ್ಯದ ಗರಿಮೆ ಸಾರುವ ಸಂಬಂಧ

ಹಾಲಿನಂತೆ ಶುಭ್ರ

ಶ್ವೇತ ವರ್ಣದ ಸಂಬಂಧ

ನವನೀತದಂತೆ ನಮ್ರತೆಯ ಬಂಧನ

ಒಡಹುಟ್ಟಿದವರು ಗರಿಮೆಯ ಹಬ್ಬ ರಕ್ಷಾಬಂಧನ

ಬದುಕಿನ ಏಳುಬೀಳಿನಲ್ಲಿ ಜೊತೆ ಇರುವೆವೆಂಬ ವಚನ ನೀಡುವ ಭಾತೃತ್ವದ ಒಲವಿನ ನೂಲಿನ ಬಂಧನ

ತಂಗಿಯ ಶುಭ ಹಾರೈಕೆ ಅಣ್ಣನ ಬಲವು 

ಅಣ್ಣನ ರಕ್ಷೆ ತಂಗಿಗೆ ಶ್ರೀರಕ್ಷೆವೆಂಬ ಅನುಬಂಧ

✍ ಅಂಜಲಿ ಶ್ರೀನಿವಾಸ