ಬದುಕೆಂದರೆ ಕನಸುಗಳ ಮಹಾಪೂರ ಕನಸುಗಳ ಮೂಟೆಯ ಹೊತ್ತು ಸಾಗುವ ಪಯಣ ಎಲ್ಲರೂ ತನ್ನವರೆಂದು ತಹತಹಿಕೆ ಒಂದಿಷ್ಟು ಸಂತೋಷ ಬೊಗಸೆಯಷ್ಟು ಪ್ರೀತಿಗೆ ಹಾತೊರೆಯುವ ಮನ. ಅವಳು ಅವನನ್ನ ಉಸಿರಂತೆ ಹಚ್ಚಿಕೊಂಡಿದ್ದಳು ಮನಸ್ಸಿನ ಪುಟಗಳಲಿ ಅವನೆಂದರೆ ಒಲವಿನ ಮಾಸದ ಅಕ್ಷರ... ಅವನ ಮಾತು ಅವನ ಪ್ರೀತಿಗಾಗಿ ಕ್ಷಣ ಕ್ಷಣಕ್ಕೂ ಹಂಬಲಿಸುತ್ತಿದ್ದಳವಳು.
ಅವಳು ಹೆಚ್ಚೆನೂ ಓದಿರಲಿಲ್ಲ. ಚಿಕ್ಕಂದಿನಲ್ಲೆ ತಾಯಿ ಅನಾರೊಗ್ಯದಿಂದ ಅಸುನೀಗುತ್ತಾರೆ.ತಂದೆಯ ಬೇಜವಾಬ್ದಾರಿತನ. ಒಡಹುಟ್ಟಿದ ತಮ್ಮಂದಿರ ಜವಾಬ್ದಾರಿ.ಅವಳು ಕೂಡ ಸಂಪಾದಿಸಲೇ ಬೇಕಾದ ಅನಿವಾರ್ಯತೆ. ಹೀಗೆ ಒಂದು ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳತಾಳೆ.ಬೇಸರವೇ ತುಂಬಿದ ಜೀವನದಲ್ಲಿ ಅವನೊಂದು ಆಶಾಕಿರಣವಾಗಿ ಬಂದನು.ಅವರಿಬ್ಬರು ಪರಸ್ಪರ ತಮ್ಮಪ್ರೀತಿಯನ್ನು ಹೇಳಿಕೊಂಡು ಮದುವೆ ಆಗತಾರೆ.ಅವನು ಗಡಿಕಾಯುವ ಯೋಧ. ಅವನ ಅನುಪಸ್ಥಿತಿಯಲ್ಲೂ ಅತ್ತೆ ಮನೆ ತವರಮನೆಯ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಳು.ತಾಯಿಯಾಗಿ ತೊಟ್ಟಿಲಲ್ಲಿ ಮಗುವಿದ್ದಾಗ ವಿಧಿ ಅವಳ ಬಾಳಲ್ಲಿ ಕ್ರೂರಿಯಾಗಿತ್ತು.ಯುದ್ಧದಲ್ಲಿ ಪತಿಯ ವೀರ ಮರಣ ಹೊಂದಿದ ಆಘಾತ ಸುದ್ದಿ.ಎಲ್ಲರೂ ಅವಳನ್ನು ಕಂಡು ಮರುಗಿದರು.ಸರಕಾರ ದಾನಿಗಳಿಂದ ಹಣ ಹರಿದು ಬಂತು.ಕೆಲವು ಸಮಯ ಕಳೆದು ಹೊಯಿತು.
ಅವಳು ಸರಕಾರದ ಸಹಾಯ ಪಡೆದು ತನ್ನದೆ ಗಾರ್ಮೆಂಟ್ಸ್ ನಡೆಸಿಕೊಂಡು ಹೋಗತಾಳೆ.ಆ ಫ್ಯಾಕ್ಟರಿ ಅಭಿವೃದ್ಧಿಯ ಪಥದಲ್ಲಿಯೂ ನಡೆಯುತ್ತದೆ.ಹಲವರಿಗೆ ಉದ್ಯೊಗ ಅವಕಾಶಗಳನ್ನು ಕಲ್ಪಿಸಿಕೊಡತ್ತಾಳೆ. ಅವಳ ಏಳ್ಗೆ ಇತರರಲ್ಲಿ ಅಸೂಯೆಯಾಗುತ್ತದೆ. ಅವಳ ಶ್ರಮಕ್ಕೆ ಅಸೂಯೆ ತುಂಬಿದ ಹೊಗಳಿಕೆಗಳು.ಯಾವುದೇ ಸಮಾರಂಭ ಸಂಬಂಧಿಕರ ಕಾರ್ಯಕ್ರಮದಲ್ಲಿಯೂ ಕೂಡ ನಿಮಗೇನು ಕಮ್ಮಿ ಸರಕಾರದಿಂದ ಹಣ ಬರುತ್ತಲ್ಲ...ಅವಳ ತಾಳ್ಮೆ ಅಂದು ಕಳೆದುಕೊಂಡಿತು. ದುಃಖ ಉಮ್ಮಳಿಸಿ ಬರುತ್ತದೆ.ಹೌದು ಸರಕಾರ ಹಣ ಕೊಡುತ್ತೆ ಆ ಹಣವನ್ನೆಲ್ಲ ವಾಪಸ್ಸು ಕೊಡುತ್ತೆನೆ ನನ್ನ ಗಂಡನನ್ನು ವಾಪಸ್ಸು ಕೊಡಸ್ತಿರಾ..? ನನ್ನ ಮಗಳಿಗ ಅವರ ತಂದೆ ವಾಪಸ್ಸು ಕೊಡಸಿ.ಎಂದು ಆಕ್ರೊಶದಿಂದ ಪ್ರತ್ಯುತ್ತರಿಸಿದಾಗ ಸಮಾರಂಭದಲ್ಲಿ ಮೌನ ಆವರಿಸಿತ್ತು.ಅಷ್ಟಕ್ಕೂ ಸರಕಾರ ಮತ್ತು ದಾನಿಗಳ ಹಣವನ್ನು ಒಂದು ಆರ್ಮಿ ಸ್ಕೂಲ್ ಶುರುಮಾಡಲು ಇಟ್ಟಿದ್ದಳು. ಇದು ಅವಳ ಗಂಡ ಆಸೆಯಾಗಿತ್ತು.ಅವಳ ಬದುಕು ಜವಾಬ್ದಾರಿ ಅವಳದೆ ಸಂಪಾದನೆಯಲ್ಲಿ ಸಾಗಿತ್ತು.ಇದಾವುದು ತಿಳಿಯದ ಜನ ಅಸೂಯೆ ತುಂಬಿದ ಮಾತಿಂದ ಚುಚ್ಚುತ್ತಿದ್ದರು.
ಬದುಕಿನಲ್ಲಿ ಒತ್ತಡದಿಂದ ಬದುಕು ಬೇಸರವಾಗಿದೆ ಎಂದು ಹೇಳುವ ಹಲವರು ಆ ಕ್ಷಣ ಯೋಧನನ್ನು ನೋಡಿ ಕಲಿಯಲೆಬೇಕು ಬದುಕನ್ನು ಪ್ರೀತಿಸೊದು ಅಂಗೈಯಲ್ಲಿ ಜೀವ ಹಿಡಿದು ಕೂಡ ನಗುವುದು ಸಂತಸವನ್ನು ಹಂಚುವುದು ಪ್ರತಿ ದಿನ ಹೊಸದೆಂಬಂತೆ ಜೀವಿಸುವುದು.ದೇಶ ಪ್ರೇಮ ತ್ಯಾಗ ಎಂದರೇನೆಂಬುವುದು.ಒಬ್ಬ ಯೋಧನಷ್ಟೇ ಅವರ ಕುಟುಂಬ ಕೂಡ ತ್ಯಾಗ ಧೈರ್ಯ ಸಾಹಸಿಯಾಗಿರುತ್ತದೆ. ನಮ್ಮದೆ ಮನೆಯ ಮಕ್ಕಳು ಮನೆಗೆ ಬರುವುದು ಒಂದು ಗಂಟೆ ತಡವಾದರೆ ಚಡಪಡಿಸುವ ನಾವು. ತನ್ನ ಮನೆಯ ದೀಪವನ್ನು ಗಡಿಕಾಯಲು ಕಳಸಿ ಬೇರೆಯರಿಗೊಸ್ಕರ ತಮ್ಮ ಮನೆ ಕತ್ತಲಾಗಿಸುಕೊಂಡ ಆ ವೀರ ಕುಟುಂಬದ ಆ ತ್ಯಾಗಕ್ಕೆ ಬೆಲೆ ಕಟ್ಟಲಾದಿತೇ...? ರಾಜಕೀಯದಲ್ಲಿ ಜನರ ದುಡ್ಡುನ್ನು ತನ್ನದೇ ಎಂಬಂತೆ ದಾನ ಮಾಡಿ ದಾನಿಗಳೆಂಬಂತೆ ಪೊಸು ನೀಡುವ ಭ್ರಷ್ಟಾಚಾರ ಹಗರಣದಲ್ಲಿ ಜೈಲು ಸೇರಿ ಮತ್ತೆ ವೋಟು ಕೇಳಲು ಬರುವ ರಾಜಕಾರಣಿಗಳಿಗೆ ಜೈಕಾರ ಹಾಕುವ ನಾವು. ಸಾವಿಗಂಜದೆ ದೇಶಕ್ಕಾಗಿ ತನ್ನ ಪ್ರಾಣರ್ಪಣೆ ಮಾಡುವ ಯೋಧ ಕುಟುಂಬದ ಮಾತಾಡುವ ಹಕ್ಕಿಲ್ಲ.ಅವರು ಮಾನ ಸನ್ಮಾನದ ಆಸೆಗೂ ದೇಶಕ್ಕಾಗಿ ಪ್ರಾಣ ಕೊಡುವುದಿಲ್ಲ.ದೇಶ ಭಕ್ತಿ ಅವರ ಅಂತರಾಳದ ಆತ್ಮ ಶಕ್ತಿ.
-By ಅಂಜಲಿ ಶಿದ್ಲಿಂಗ್