Press Release

ಕುರ್ಲಾ: ಮಾತೃಭಾಷೆಯು ಹೃದಯಕ್ಕೆ ಹತ್ತಿರವಾದ ಭಾಷೆಯು ಆಗಿದ್ದು ಸಂವಹನ ಮಾಡುತ್ತಿರುವಾಗ ಭಾವನೆಗಳು ಹೊರಹೊಮ್ಮಿ ಆಪ್ತತೆಯ ನಿಕಟತೆಯು ಮೇಳೈಸಿ ಅಪ್ಯಾಯಮಾನವಾದ ಬಂಧುತ್ವವು ಬೆಸೆಯುತ್ತದೆ. ಆದ್ದರಿಂದ ಮಾತೃಭಾಷೆಯನ್ನು ಪ್ರೀತಿಸುವವರು ಅದನ್ನು ಉಳಿಸಿ ಬೆಳೆಸಲು ಹುಮ್ಮಸ್ಸಿನಿಂದ ಕಾರ್ಯತತ್ಪರರಾಗಿ ಹಗಲಿರುಳು ಶ್ರಮಿಸುವುದನ್ನು ನಾವು ಕಾಣುತ್ತಿರುತ್ತೇವೆ. ಅದಕ್ಕೆ ಸಾಕ್ಷಿ ಎಂಬಂತೆ ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಅತ್ಯಧಿಕವಾಗಿ ತುಳುವರೇ ಆಗಿದ್ದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಬೇಕೆಂಬ ತುಳುವರ ಆಂತರ್ಯದ ಧ್ವನಿಯು ಊರು, ಪರವೂರುಗಳಲ್ಲಿ ಪ್ರತಿಧ್ವನಿಸುವುದನ್ನು ಕೇಳುತ್ತಾ ಇದ್ದೇವೆ.ಆ ನಿಟ್ಟಿನಲ್ಲಿ 'ತುಲುವೆರ ಕಲ'  ಎಂಬ ಸಂಸ್ಥೆಯು ಗೀತಾ ಲಕ್ಷ್ಮೀಶ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡದಾದ್ಯಂತ ತುಳು ಭಾಷೆಯ ಉಳಿವಿಗಾಗಿ ಸತತ ಪರಿಶ್ರಮ ಪಡುತ್ತಿದ್ದು , ತುಳು ಲಿಪಿಯನ್ನು ಆಸಕ್ತಿ ಉಳ್ಳವರಿಗಾಗಿ ಕಲಿಸುತ್ತಿದ್ದು ತುಳು ಬಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ಬಹುತೇಕ ಶ್ರಮಿಸುತ್ತಿದೆ. ಕಳೆದ ವರ್ಷ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಪ್ರಥಮ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ತುಳು ಭಾಷೆಯ ಮೇಲಿರುವ ವ್ಯಾಮೋಹವನ್ನು ಎಲ್ಲೆಡೆ ಸಾರಿ ವಿಜೃಂಭಿಸಿದೆ. ಕೇವಲ ತುಳುವಿನಲ್ಲಿಯೇ ಬರಹಗಳನ್ನು ಬರೆಯುವುದಕ್ಕಾಗಿ ವಾಟ್ಸಾಪಿನಲ್ಲಿ ಒಂದು ಗ್ರೂಪ್ ಮಾಡಿ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟು ತುಳು ಪ್ರೌಢಿಮೆಯನ್ನು ಉದ್ದಗಲಕ್ಕೆ ಪಸರಿಸುತ್ತಿರುವ ಮಹಾಕಾರ್ಯವನ್ನು ಮಾಡಿ ಭೇಷ್ ಎನಿಸಿಕೊಂಡಿದೆ. ಅದರಂತೆ ಈ ವರ್ಷ ಎರಡನೇ ವಾರ್ಷಿಕೋತ್ಸವವನ್ನು ಕೂಡಾ ಕೊಂಡೆವೂರಿನಲ್ಲಿ

ಕವಿಗೋಷ್ಠಿಯೊಂದಿಗೆ ನಡೆಸಿದ್ದು ಹೆಮ್ಮೆಯ ವಿಷಯ .ಈಗ ಮುಂಬೈಯಲ್ಲಿ  ತುಳು ಭಾಷೆಗೆ ಅಧಿಕತಮ ಸ್ಥಾನಮಾನ ಸಿಗಬೇಕು ಎನ್ನುವ ಸದುದ್ಧೇಶದಿಂದ ಮಹತ್ತರವಾದ ಯೋಜನೆಯನ್ನು ರೂಪಿಸಿ ಊರು ಮತ್ತು ಮುಂಬೈಯವರ ಜಂಟಿ ಆಯೋಜನೆಯಲ್ಲಿ "ತುಲುವೆರೆ ಮಿನದನ" ಎಂಬ ತುಳು ಕಾರ್ಯಕ್ರಮವು ಅಗಸ್ಟ್  23 ಶನಿವಾರದಂದು ಮಧ್ಯಾಹ್ನ 2 ಗಂಟೆಯಿಂದ ಬಂಟರ ಭವನ ಕುರ್ಲಾ ಇದರ ಎನೆಕ್ಸ್ ಹಾಲ್‌ನಲ್ಲಿ ವಿಜೃಂಭಣೆಯಿಂದ ಜರಗಲಿದೆ.

ತುಲುವೆರ ಕಲದ ಮಹಾರಾಷ್ಟ್ರದ ಸಂಚಾಲಕಿಯಾಗಿ ಹರಿಣಿ ಎಂ.ಶೆಟ್ಟಿ ಕಾಪು ಅವರನ್ನು ನೇಮಿಸಲಾಗಿದ್ದು ಮುಂಬೈಯ ತುಳು ಬರಹಗಾರರ ಜೊತೆಗೂಡಿ ಕಾರ್ಯಕ್ರಮದ ರೂಪುರೇಷೆಯನ್ನು ನಡೆಸಿ ಸಾಫಲ್ಯತೆಯ ಯಶಸ್ವಿಗಾಗಿ  ಶ್ರಮಿಸುವುದು ಅಭಿನಂದನೀಯ. ಇದು  ಮುಂಬೈಯಲ್ಲಿ ತುಳು ಭಾಷೆಯ ಹಿರಿಮೆಯನ್ನು  ಅತ್ಯುನ್ನತ ಸ್ಥಾನದಲ್ಲಿರಿಸಲು ನಡೆಸುವ ಪ್ರಥಮ ಪ್ರಯೋಗವೆಂದೇ ಹೇಳಬಹುದು.  ಈ ಕಾರ್ಯಕ್ರಮಕ್ಕೆ ಆನೇಕ ಗಣ್ಯಾತಿಗಣ್ಯರು ಆಗಮಿಸಿ ಈ ತುಲುವೆರ ಕಲದ ನವೀನ ಯೋಜನೆಗೆ ಶುಭ ಹಾರೈಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ತುಲುವೆರೆ ಕಲದ ಸಂಸ್ಥಾಪಕಿ, ತುಳು ಲಿಪಿ ಶಿಕ್ಷಕಿ ಗೀತಾ ಲಕ್ಷ್ಮೀಶ್ ವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಬಂಟರ ಸಂಘ, ಮುಂಬಯಿಯ ಅಧ್ಯಕ್ಷರು ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು, ಜಾಗತಿಕ ಬಂಟರ ಸಂಘ ಒಕ್ಕೂಟ, ಉದಯ ಸುಂದರ್ ಶೆಟ್ಟಿ, ನಿರ್ದೇಶಕರು, ಸಾಯಿ ಪ್ಯಾಲೇಶ್ ಗ್ರೂಪ್ ಆಫ್ ಹೋಟೆಲ್ಸ್, ಆರ್.ಕೆ.ಶೆಟ್ಟಿ, ಕಾರ್ಯದರ್ಶಿ, ಬಂಟರ ಸಂಘ ಮುಂಬೈ, ಧರ್ಮಪಾಲ ದೇವಾಡಿಗ  ಅಧ್ಯಕ್ಷರು, ದೇವಾಡಿಗ ವಿಶ್ವ ಮಹಾಮಂಡಲ, ಹರೀಶ್ ಎಸ್.ಶೆಟ್ಟಿ ಪಡುಕುಡೂರ್, ನಿರ್ದೇಶಕರು, ಜಾಗತಿಕ ಬಂಟರ ಸಂಘ ಒಕ್ಕೂಟ,  ಗೌರವಾನ್ವಿತ ಅತಿಥಿಗಳಾಗಿ ರವೀಂದ್ರನಾಥ ಭಂಡಾರಿ, ಮಧ್ಯವಲಯ ಸಮನ್ವಯಕರು, ಬಂಟರ ಸಂಘ ಮುಂಬೈ, ಗಿರೀಶ್ ಶೆಟ್ಟಿ ತೆಳ್ಳಾರ್ , ಜೊತೆ ಕಾರ್ಯದರ್ಶಿ ಬಂಟರ ಸಂಘ ಮುಂಬೈ, ಡಾ.ದಿವಾಕರ್ ಶೆಟ್ಟಿ ಇಂದ್ರಾಳಿ, ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬೈ, ಸುಬ್ಬಯ್ಯ ಕೆ.ಶೆಟ್ಟಿ ಸೂರಿಂಜೆ, ಉಪ ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬೈ, ಕದ್ರಿ ನವನೀತ್ ಶೆಟ್ಟಿ, ಖ್ಯಾತ ಸಾಹಿತಿ, ಸಂಘಟಕರು ಮತ್ತು ನಿರೂಪಕರು, ಚಿತ್ರಾ ಆರ್ ಶೆಟ್ಟಿ, ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ , ಬಂಟರ ಸಂಘ ಮುಂಬೈ, ಆನಂದ್ ಡಿ.ಶೆಟ್ಟಿ ಎಕ್ಕಾರು, ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬೈ ಡೊಂಬಿವಿಲಿ ರೀಜನ್ ಕಮಿಟಿ, ಪ್ರಭಾಕರ್ ಆರ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬೈ ಡೊಂಬಿವಿಲಿ ರೀಜನ್ ಕಮಿಟಿ, ಅರುಣ್ ಕೆ.ಶೆಟ್ಟಿ ಪಡುಕುಡೂರ್ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ , ಬಂಟರ ಸಂಘ ಮುಂಬೈ ಡೊಂಬಿವಿಲಿ ರೀಜನ್ ಕಮಿಟಿ, ರಾಜೀವ್ ಎಂ. ಭಂಡಾರಿ ಮಾಜಿ ಕಾರ್ಯಾಧ್ಯಕ್ಷರು, ಡೊಂಬಿವಿಲಿ ರೀಜನ್ ಕಮಿಟಿ , ಬಂಟರ ಸಂಘ ಮುಂಬೈ ಇವರು ಆಗಮಿಸಲಿದ್ದಾರೆ . ಸ್ವಾಗತವನ್ನು ಮಹಾರಾಷ್ಟ್ರದ ಸಂಚಾಲಕಿ ಹರಿಣಿ ಎಂ.ಶೆಟ್ಟಿ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ತುಳು ಕವನಗಳಿಗೆ ಆದ್ಯತೆ ನೀಡುವ ಸಲುವಾಗಿ ತುಳು ಹಾಸ್ಯ ಚುಟುಕು ಕವಿಗೋಷ್ಠಿಯನ್ನು ಆಯೋಜಿಸಿದ್ದು ಇದರ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ, ನಿರೂಪಕರಾದ ಅಶೋಕ್ ಪಕ್ಕಳ  ವಹಿಸಲಿದ್ದಾರೆ.  ಊರು ಮತ್ತು ಮಹಾರಾಷ್ಟ್ರದ ಕವಿಗಳು  ಭಾಗವಹಿಸಲಿದ್ದು ನಂದಳಿಕೆ ನಾರಾಯಣ ಶೆಟ್ಟಿ, ಸಾ.ದಯಾ, ಲಕ್ಷ್ಮೀನಾರಾಯಣ ರೈ ಹರೇಕಳ,  ಪ್ರಪುಲ್ಲ ದಿನೇಶ್ ಶೆಟ್ಟಿ, ಕುಮುದಾ ಡಿ.ಶೆಟ್ಟಿ, ಶೋಬಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು, ಮೈನಾ ಪಿ.ಶೆಟ್ಟಿ, ಡಾ.ಜಿ.ಪಿ.ಕುಸುಮ, ಮಮತಾ ಅಂಚನ್ ಪುಣೆ, ಕುಸುಮ ಸಾಲ್ಯಾನ್ ಪುಣೆ, ಭೂಮಿಕಾ ಎಂ.ಶೆಟ್ಟಿ , ಸರ್ವಮಂಗಳಾ ಶೆಟ್ಟಿ, ಲತಾ ಎಸ್.ಶೆಟ್ಟಿ ಮುದ್ದುಮನೆ, ವಾಣಿ ಶೆಟ್ಟಿ, ದೀಪಾ ಎಚ್. ಶೆಟ್ಟಿ, ಉಷಾ ಶೆಟ್ಟಿ, ಶಾಂತಾ ಎನ್ .ಶೆಟ್ಟಿ, ಸೂರಿ ಮಾರ್ನಾಡ್ , ಟೀಂ ಐಲೇಸಾ, ಪ್ರಮೋದಾ ಮಾಡಾ, ಸವಿತಾ ಸಾಲ್ಯಾನ್, ರೇಮಂಡ್ ಡಿಕೋನಾ ತಾಕೊಡೆ, ಶ್ಯಾಮ್ ಪ್ರಸಾದ್ ಭಟ್, ಅನುರಾಧ ರಾಜೀವ್ ಸುರತ್ಕಲ್, ನಳಿನಿ ಭಾಸ್ಕರ್ ಶೆಟ್ಟಿ, ಚಂದ್ರಹಾಸ ಕುಂಬಾರ ಬಂದಾರು, ಮುರಳೀಧರ ಆಚಾರ್ಯ, ಪದ್ಮನಾಭ ಪೂಜಾರಿ ಬಂಟ್ವಾಳ, ಸೌಮ್ಯ ಆರ್.ಶೆಟ್ಟಿ, ಸವಿತಾ ಕರ್ಕೇರ ಕಾವೂರು, ಪ್ರಶಾಂತ್ ಎನ್.ಆಚಾರ್ಯ , ಪದ್ಮನಾಭ ಮಿಜಾರ್, ಜಯರಾಮ ಪಡ್ರೆ, ಅಶ್ವಿನಿ ತೆಕ್ಕುಂಜ ಕುರ್ನಾಡ್, ರಾಜೇಶ್ ಶೆಟ್ಟಿ ದೋಟ ಇವರೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ

ಈ ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳು  ಲೋಕಾರ್ಪಣೆಗೊಳ್ಳಲಿವೆ. ಮೊದಲಿಗೆ ಹರಿಣಿ ಎಂ.ಶೆಟ್ಟಿ ಕಾಪು ಮನಾಲಿ ಆರ್ಟ್ಸ್ ಮುಂಬಯಿ  ಅವರ  "ಮುತ್ತುದಾ ಪನಿ" ಎಂಬ ತುಳು  ಕವನ ಸಂಕಲನವು ಬಿಡುಗಡೆಗೊಳ್ಳಲಿದೆ. ಇದನ್ನು ಖ್ಯಾತ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಸುನೀತಾ ಎಂ.ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಈ ಕವನ ಸಂಕಲನದ  ಪರಿಚಯವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿರುವ ಡಾ.ಪೂರ್ಣಿಮಾ ಶೆಟ್ಟಿ ಮಾಡಲಿದ್ದಾರೆ. ಇನ್ನೊಂದು "ಸಿರಿ ಕುರಲ್" ಎಂಬ ತುಲುವೆರ ಕಲದ ಬರಹಗಾರರು ರಚಿಸಿದ ಸಂಕಲನವು  ಗೀತಾ ಲಕ್ಷ್ಮೀಶ್ ಅವರ ಸಂಪಾದಕತ್ವದಲ್ಲಿ ಡಾ.ಸುನೀತಾ ಎಂ.ಶೆಟ್ಟಿ ಅವರ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಪರಿಚಯವನ್ನು ರೇಮಂಡ್ ಡಿಕೊನಾ ತಾಕೊಡೆ ಮಾಡಲಿದ್ದಾರೆ. ಇಡೀ  ಕಾರ್ಯಕ್ರಮದ ನಿರೂಪಣೆಯನ್ನು ರೇಣುಕಾ ಕಣಿಯೂರು ನಿರ್ವಹಿಸಲಿದ್ದಾರೆ.

ನಿರಂತರವಾಗಿ ತುಳು ಬರಹಗಳನ್ನು ಬರೆದು ತುಳು ಭಾಷೆಯ ಅಸ್ತಿತ್ವಕ್ಕಾಗಿ ಶ್ರಮಿಸುತ್ತಿರುವವರಿಗೆ  ತುಲುವೆರ ಕಲ ಸಂಸ್ಥೆಯ ವತಿಯಿಂದ "ಕಲತ್ತ ಬೊಲ್ಲಿ " ಪುರಸ್ಕಾರ ನೀಡಿ ಗೌರವಿಸಿ ಬರಹಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ.  ಈ ವರ್ಷದ ಕಲತ್ತ ಬೊಲ್ಲಿ ಪುರಸ್ಕಾರ ಪ್ರಪುಲ್ಲ ದಿನೇಶ್ ಶೆಟ್ಟಿ  ಪಡುಕುಡೂರ್ , ಡೊಂಬಿವಿಲಿ ಅವರಿಗೆ ನೀಡಿ ಸನ್ಮಾನಿಸಲಾಗುತ್ತಿರುವುದು ಪ್ರಶಂಸನೀಯ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ  'ಪೊಲ್ಲಕ್ಕೆ ದುಬೈಡ್' ಎಂಬ ತುಳು ಹಾಸ್ಯ ಕಿರು ಪ್ರಹಸನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ತುಳು ಭಾಷೆಯ ಹಿರಿಮೆಯನ್ನು ಸಾರುವುದಕ್ಕಾಗಿ ಆಯೋಜನೆಗೊಂಡ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ತುಳು- ಕನ್ನಡಿಗರು  ಭಾಗವಹಿಸಬೇಕೆಂದು ತುಲುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಮಹಾರಾಷ್ಟ್ರದ ಸಂಚಾಲಕಿ ಹರಿಣಿ ಶೆಟ್ಟಿ ಮತ್ತು  ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.