ಖೇಲೋ ಇಂಡಿಯಾ ಮಂಗಳೂರು ವಾರ್ಸಿಟಿ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿ ಆ್ಯನ್ ಮರಿಯಾ ಅವರು 87 ಕಿಲೋ ವಿಭಾಗದ ಕ್ಲೀನ್‌ನಲ್ಲಿ 129 ಕಿಲೋ ಭಾರ ಎತ್ತಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

128 ಕಿಲೋ ಭಾರ ಎತ್ತಿದ್ದ ಮನ್ ಪ್ರೀತ್ ಕೌರ್ ಹೆಸರಿನಲ್ಲಿ ಇದ್ದ ದಾಖಲೆ ಪತನವಾಯಿತು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು 230 ಕಿಲೋ ಎತ್ತಿದ ಆ್ಯನ್ ಮರಿಯಾ ಚಿನ್ನದ ಪದಕ ಗಳಿಸಿದರು. ಇವರು ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿನಿ.