ಮಂಗಳೂರು: ನಗರದ ಉರ್ವ ಮೈದಾನದಲ್ಲಿ ಮೂರು ದಿನಗಳಕಾಲ ನಡೆದ ಕದ್ರಿ ಕ್ರಿಕೇಟರ್ಸ್ ಕ್ಲಬ್ ನ ಎಂಟನೆ ಆವೃತ್ರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಕೆಪಿಎಲ್ ಟ್ರೋಫಿ ಯನ್ನು ಮೋಹನ್ ಕೊಪ್ಪಲ ಮಾಲಿಕತ್ವದ ಮೋಹನ್ ಥಂಡರ್ಸ್ ಪಡೆದುಕೊಂಡಿದೆ.

ಕಳೆದ ಎಂಟು ವರುಷದಿಂದ ಕದ್ರಿ ಕ್ರಿಕೇಟರ್ಸ್ ಈ ಪಂದ್ಯಾಟ ನಡೆಸುತ್ತಾ ಬರುತ್ತಿದೆ. ಈ ಬಾರಿ ಉರ್ವ ಮೈದಾನದಲ್ಲಿ ಪಂದ್ಯಾಟ ನಡೆದಿದ್ದು ಏಳು ತಂಡಗಳು ಭಾಗವಹಿಸಿದ್ದವು.

ಕೆಪಿಎಲ್ ಟ್ರೋಫಿ ಮೋಹನ್ ಥಂಡರ್ಸ್ ಪಾಲಾದರೆ ರನ್ನರ್ ಅಪ್ ಪ್ರಶಸ್ತಿಯನ್ನು ಕಿಶೋರ್ ಡಿ ಶೆಟ್ಟಿ ಮಾಲಕತ್ವದ ಲೀಡ್ಸ್ ನೈಟ್ ಟ್ರೇಡರ್ಸ್ ಪಡೆದುಕೊಂಡಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕರಾದ ವೇದವ್ಯಾಸ್ ಕಾಮತ್ ಅವರು, ಕದ್ರಿ ಕ್ರಿಕೇಟರ್ಸ್ ಕ್ಲಬ್ ನಡೆಸುತ್ತಿರುವ ಕ್ರೀಡಾ ಹಬ್ಬ ಉತ್ತಮ ಪ್ರಯತ್ನ. ಇದು ನಮ್ಮೊಳಗಿನ ದ್ವೇಷ ದೂರ ಮಾಡಿ ಸ್ನೇಹ ಬೆಸೆಯುತ್ತದೆ ಎಂದರು. ವೇದಿಕೆಯಲ್ಲಿ ಲಯನ್ಸ್ ರಾಜ್ಯಪಾಲರಾದ ಲಯನ್ ವಸಂತ ಕುಮಾರ್ ಶೆಟ್ಟಿ ಸಂಪುಟ ಕಾರ್ಯದರ್ಶಿ ಲಯನ್ ಶಶಿಧರ್ ಮಾರ್ಲ, ತಂಡಗಳ ಮಾಲಕರಾದ, ರತ್ನಾಕರ್ ಜೈನ್, ಸುಧೀರ್, ಗೋಕುಲ್‌ಕದ್ರಿ, ಅಮೃತ್ ಕದ್ರಿ, ಲಕ್ಷ್ಮೀಶ್ ಭಂಡಾರಿ, ಸಂಸ್ಥೆ ಅಧ್ಯಕ್ಷ ದೀಪಕ್ ಸಾಲ್ಯಾನ್, ಆಸರೆ ಫ್ರೆಂಡ್ಸ್ ಅಧ್ಯಕ್ಷರಾದ ದಿನೇಶ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಸೂರಜ್ ಶೇಟ್, ರಾಜೇಶ್ ಬೆಂಗ್ರೆ, ಪೆಡ್ರಿಕ್ ಪೌಲ್   ಮುಂತಾದವರು ಉಪಸ್ಥಿತರಿದ್ದರು