ಮಂಗಳೂರು:- ಬೆಂಗಳೂರಿನಲ್ಲಿ ಮಂಗಳವಾರ 710 ಹೊಸ ಕೊರೋನಾ ಪಾಸಿಟಿವ್ ಜೊತೆಗೆ ಕಳೆದ ಮೂರು ತಿಂಗಳಲ್ಲಿ ಸಾವಿರ ದಾಟಿದ ಅಂದರೆ 1,135 ಕೋವಿಡ್ ಸೋಂಕು ರೋಗ ವರದಿಯಾಗಿದೆ. ಕಳೆದ 2020ರ ಡಿಸೆಂಬರ್ 25ರಂದು ಸಾವಿರ ದಾಟಿದ 1,005 ಕೋವಿಡ್ 19 ಬಾಧೆ ಬೆಂಗಳೂರಿನಲ್ಲಿ ವರದಿಯಾಗಿತ್ತು. ಸೋಂಕು ರೋಗ ತಜ್ಞರಾದ ಡಾ. ಗಿರಿಧರ್ ಬಾಬು ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಹೊಸ ಕೊರೋನಾ ಕಾಟ ವರದಿಯಾಗಿದ್ದು ಅದು ಬಿಟ್ಟರೆ ಗಡಿ ಜಿಲ್ಲೆಗಳಾದ ಮಂಗಳೂರು, ಬೀದರ್, ಗುಲ್ಬರ್ಗಗಳಲ್ಲಿ ಕೊರೋನಾ ಮತ್ತೆ ತನ್ನ ಬಾಲ ಬಿಚ್ಚಿದೆ.ಲಸಿಕೆ ನೀಡಿಕೆ ವಯಸ್ಸಿನ ಪರಿಮಿತ ಗೊತ್ತುಪಡಿಸಬಾರದು ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಕರ್ನಾಟಕದಲ್ಲಿ ಇಲ್ಲಿವರೆಗೆ 9,62,339 ಜನ ಕೊರೋನಾ ರೋಗಕ್ಕೆ ಒಳಗಾಗಿದ್ದು, ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 12,403 ಜನ ಕೊರೋನಾ ಕಾರಣದಿಂದ ಮರಣ ಕಂಡಿದ್ದಾರೆ. ಸದ್ಯ ರಾಜ್ಯದಲ್ಲಿ 9,428 ಕೋವಿಡ್ 19 ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 9,299 ಜನ ಈಗಲೂ ಐಸೊಲೇಶನ್ ಸಾಂಕ್ರಾಮಿಕ ರೋಗಗಳಿಗಾಗಿ ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರುಷ ದಾಟಿದರೂ ಈ ಸೋಂಕು ರೋಗಕ್ಕೆ ನಿಶ್ಚಿತ ಔಷಧಿ ಯಾವುದೂ ಇಲ್ಲ. ಆ ಲಕ್ಷಣದ ರೋಗ ಲಕ್ಷಣ ಗಮನಿಸಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆಯೆಂದು ಅವರು ವಿವರಿಸಿದರು.
ಈ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 3, ಧಾರವಾಡ, ಕಲಬುರಗಿ, ಮೈಸೂರುಗಳಲ್ಲಿ ತಲಾ ಒಂದು ಕೊರೋನಾ ಸಾವು ಆಗಿದೆ. ದಕ್ಷಿಣ ಕನ್ನಡದಲ್ಲಿ 50, ಮೈಸೂರಿನಲ್ಲಿ 58, ಕಲಬುರಗಿಯಲ್ಲಿ 46, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 38 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಒಟ್ಟು 1,99,21,424 ಗಂಟಲು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಮಂಗಳವಾರ ಒಂದೇ ದಿನ 68,469 ಮಾದರಿಯ ಪರೀಕ್ಷೆ ಆಗಿದೆ. ಅದರಲ್ಲಿ 6,485ನ್ನು ಕ್ಷಿಪ್ರ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಯಿತು.