(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಬೃಹನ್ಮುಂಬಯಿಯಲ್ಲಿನ  ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಮಹಾರಾಷ್ಟ್ರದ ಮಥುರಾ ಪ್ರಸಿದ್ಧಿಯ ಸಯಾನ್ ಪಶ್ಚಿಮದಲ್ಲಿನ ಗೋಕುಲ ಮಂದಿರದಲ್ಲಿ ಇಂದಿಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.  

ಮೊಸರು ಕುಡಿಕೆ ದಿನವಾದ ಇಂದಿಲ್ಲಿ ಗುರುವಾರ ದೇವಾಲಯದಲ್ಲಿ ಮಧ್ಯಾಹ್ನ ಮಹಾ ಪೂಜೆಯ ನಂತರ ಪ್ರಪ್ರಥಮವಾಗಿ  ನೆರೆದ ಸಮಸ್ತ ಭಕ್ತಾದಿಗಳಿಗೆ ಜನ್ಮಾಷ್ಟಮಿಯ ಮಹಾ ಅನ್ನಪ್ರಸಾದ ವಿತರಣೆ ನಡೆಸಲ್ಪಟ್ಟಿತು. ಅಪರಾಹ್ನ ಸದಸ್ಯರು, ವಿವಿಧ ಕಲಾವಿದರಿಂದ ಹುಲಿವೇಷ ಕುಣಿತ, ಕರಿವೇಷ, ಯಕ್ಷಗಾನ ವೇಷ, ಚೆಂಡೆವಾದನ, ವಾದ್ಯವೃಂದದ ನೀನಾದ, ಕುಣಿತ ಭಜನೆ ವೈಭವದೊಂದಿಗೆ ಉಡುಪಿ ವೈಶಿಷ್ಟ್ಯದ ಸಂಪ್ರದಾಯಿಕ  ಭವ್ಯತೆಯಲ್ಲಿ ಶ್ರೀಕೃಷ್ಣನಿಗೆ ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ವೈಭವೋಪೇತ ಉತ್ಸವದೊಂದಿಗೆ ಭಗವದ್ಭಕರು, ವೃತ್ತಿಪರ ತಂಡಗಳು ದೇವಾಲಯ ಪ್ರಾಂಗಣದಲ್ಲಿ ವರುಣನ ಸಿಂಚನದೊಂದಿಗೆ ಹರ್ಷೋದ್ಗಾರದಿಂದ ದಹಿಹಂಡಿ ಒಡೆದು ಮೊಸರು ಕುಡಿಕೆ ಸಂಭ್ರಮಿಸಿದರು.

ಮಧ್ಯಾಂತರದಲ್ಲಿ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಸಭಾಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ನಿಕಟಪೂರ್ವ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಎಂ.ಎಸ್ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದು, ಬಿಎಸ್‍ಕೆಬಿಎ ಮತ್ತು ಜಿಪಿಟಿ ಟ್ರಸ್ಟ್‍ನ ಪರವಾಗಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಪದಾಧಿಕಾರಿಗಳು ಜೊತೆಗೂಡಿ ಬ್ಯಾಂಕಿಂಗ್ ಕ್ಷೇತ್ರದ ಅನುಪಮ ಸೇವೆಗಾಗಿ ಮಹಾಬಲೇಶ್ವರ ಭಟ್ ಇವರಿಗೆ `ವಿಪ್ರ ಭೂಷಣ' ಬಿರುದು ಪ್ರದಾನಿಸಿ ಸನ್ಮಾನಿಸಿ ಗೌರವಿಸಿದರು.

ಮಹಾಬಲೇಶ್ವರ ಭಟ್ ಮಾತನಾಡಿ ಇದು ನನಗೆ ಅಲ್ಲ ಕರ್ನಾಟಕ ಬ್ಯಾಂಕ್‍ಗೆ ಸಂದ ಗೌರವ. ಗೋಕುಲದಲ್ಲಿ ಜನಪರ ಒಳ್ಳೆಯ ಕೆಲಸ ಆಗುತ್ತಿರುವುದು ಸ್ತುತ್ಯಾರ್ಹ.ಇದರ ಹಿಂದೆ ಮುಂದೆ ಯಾರಿದ್ದರು ಎಂದು ಹೇಳಬೇಕೆಂದಿಲ್ಲ, ನಮ್ಮೆಲ್ಲರ ಪ್ರತಿನಿಧಿಯಾಗಿ ಡಾ| ಸುರೇಶ್ ರಾವ್ ಅವರು ಇರುವುದು ಅಭಿನಂದನೀಯ. ಅನೇಕ ಶತಮಾನಗಳ ವರೆಗೆ ಖುಷಿ, ನೆಮ್ಮದಿಯಿಂದ ನಸ್ಮರಿಸುವಂತಹ ಭವ್ಯ ಗೋಕುಲವಾಗಿದೆ. ಇದರ ಎಲ್ಲಾ ನಿರ್ಮಾಕೃರ್ತರಿಗೆ, ಪದಾಧಿಕಾರಿಗಳಿಗೆ ಅಭಿವಂದನೆಗಳು. ಮುಂದೆ ಇದನ್ನು ಯಾವ ರೀತಿಯಲ್ಲಿ ನಡೆಸುವಂತದ್ದು ನಮ್ಮೆಲ್ಲರಿಗೂ ಸೇರಿದ್ದು, ಯಾವ ಯಾವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆಯೋ ಅವೆಲ್ಲವೂ ಶ್ರೀಕೃಷ್ಣನ ಆಶೀರ್ವಾದದಿಂದ ಫಲಪ್ರದವಾಗಲಿ. ನಿಮ್ಮೆಲ್ಲರಿಗೂ ಅಷ್ಟಮಿಯ ಶುಭಾಶಯಗಳು ಎಂದು ನುಡಿದರು.

ಹಿಂದೂಗಳ ಪಾಲಿಗೆ ಶ್ರೀಕೃಷ್ಣಾಷ್ಟಮಿ ಮಹತ್ವದ ಹಬ್ಬವಾಗಿದೆ. ಆದುದರಿಂದ ಸತ್ಕಾರ್ಯ, ಶುಭಕಾರ್ಯಗಳಿಗೆ ಕೃಷ್ಣಾಷ್ಟಮಿ ಶುಭ ಮುಹೂರ್ತವಾಗಿದೆ. ಸಾಮಾಜಿಕ ಏಕತೆಯನ್ನು ಸುಗಮಗೊಳಿಸುವಲ್ಲಿ ಶ್ರೀ ಕೃಷ್ಣಾಷ್ಟಮಿ ಪೂರಕವಾಗಿದ್ದು ಇದನ್ನು ಪೂರೈಸಲು ಗೋಕುಲವು ಒಂದು ಆಧ್ಯಾತ್ಮಿಕ ಕೇಂದ್ರವಾಗಿದೆ ಎಂದು ಡಾ| ಸುರೇಶ್ ರಾವ್ ತಿಳಿಸಿದರು.  

ಗೋಕುಲ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ ಗೋಪಾಲಕೃಷ್ಣನ ಸಾನಿಧ್ಯದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ಇವರ ವೈದಿಕತ್ವದಲ್ಲಿ ಶಂಖದಲ್ಲಿ ಹಾಲಿನ ಅಭಿಷೇಕಗೈದು ರಾತ್ರಿ ಪೂಜೆ, ಮಹಾ ಮಂಗಳಾರತಿ ಇತ್ಯಾದಿಗಳೊಂದಿಗೆ ಭಗವಾನ್ ಕೃಷ್ಣನ ಜನ್ಮಾಷ್ಟಮಿ ನೆರೆವೇರಿಸಿದರು. ಗೋಕುಲದ ಆರ್ಚಕ ಗಣೇಶ್ ಭಟ್, ಸಹ ಆರ್ಚಕ ಗುರುಪ್ರಸಾದ್ ಭಟ್ ಮತ್ತಿತರ ಪುರೋಹಿತರು ಇತರ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಹರಸಿದರು. ಪ್ರಸಾದ ರೂಪಿತ ಉಪಾಹಾರದೊಂದಿಗೆ ವಾರ್ಷಿಕ ಶ್ರೀಕೃಷ್ಣಾಷ್ಟಮಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಉಪಾಧ್ಯಕ್ಷÀರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಸಿಎ| ಹರಿದಾಸ ಭಟ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.