ಮಂಗಳೂರು: ದತ್ತ ನಗರ ಮಂಗಳೂರು ಇಲ್ಲಿ ನೂತನವಾಗಿ ನಿರ್ಮಾಣಗೊಂಡ ದತ್ತ ನಗರ ರಂಗ ಮಂದಿರವನ್ನು ಶಾಸಕರಾದ ವೇದವ್ಯಾಸ ಕಾಮತ್  ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದತ್ತ ನಗರವು ಸ್ವಚ್ಛತೆ ಒಗ್ಗಟು ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬರುತ್ತಿದ್ದು, ಇತರ ಬಡಾವಣೆಗಳಿಗೆ ಮಾದರಿಯಾಗಿದೆ.

ದತ್ತ ನಗರದಲ್ಲಿ  ಸ್ಥಳೀಯ ಒಣ ಕಸ ಮತ್ತು  ಹಸಿ ಕಸವನ್ನು ಸಂಸ್ಕರಿಸುವ ಸಲುವಾಗಿಸಂಸ್ಕರಣ ಘಟಕವನ್ನು ನಿರ್ಮಿಸುವುದಾದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಬ್ಬ ಹರಿದಿನಗಳ ಆಚರಣೆಗೆ ಸಮಯದ ಮಿತಿಯನ್ನು 10 ಗಂಟೆಗೆ ಸೀಮಿತಗೊಳಿಸಿ ನಮ್ಮ ಧಾರ್ಮಿಕ ಆಚರಣೆಗೆ ಅಂಕುಶ ಹಾಕಲು ಮುಂದಾಗುತ್ತಿದೆ.

ಇಂತಹ ನಡೆಯನ್ನ ಬಿಜೆಪಿ ವಿರೋಧಿಸುತ್ತದೆ. ಮಾತ್ರವಲ್ಲ ಹಬ್ಬ ಹರಿದಿನಗಳನ್ನು ನಾವು ಮುಕ್ತವಾಗಿ ಆಚರಿಸುತ್ತೇವೆ ಯಾವುದೇ ಕಾರಣಕ್ಕೂ ಇಂಥ ಪೊಳ್ಳು ಬೆದರಿಕೆಗಳಿಗೆ ತಲೆಬಾಗುವುದಿಲ್ಲ . ಪೊಲೀಸರ ಮೂಲಕ ಜಾಂಗ್ರೆಸ್  ಸರಕಾರವು ಅಡ್ಡಿಪಡಿಸಲು ಮುಂದಾದರೆ ಸ್ವತಹ ನಾನೇ ಭಾಗವಹಿಸಿ ಬೀದಿ ಬೀದಿಯಲ್ಲಿ ಹಬ್ಬಹಚರಿಸಲು ಮುಂದಾಗುತ್ತೇನೆ ಎಂದು ಘೋಷಿಸಿದರು.

ವಿಶ್ವವಿದ್ಯಾನಿಲಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಗಣೇಶ್ ಉತ್ಸವ ಉತ್ಸವವನ್ನು ನಿಲ್ಲಿಸದಂತೆ ಮನವಿ ಮಾಡಿದ್ದೇವೆ. ನಮ್ಮ ಪರಂಪರೆ ಧಾರ್ಮಿಕ ಉತ್ಸವದಿಗಳು ಯಥಾಸ್ಥಿತಿಯಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶಕೀಲಾ ಕಾವಾ ಮಾತನಾಡಿ, ರಂಗಮಂದಿರವು ಸರ್ವರಿಗೂ ಸದುಪಯೋಗವಾಗಲಿ ಈ ಮೂಲಕ ಉತ್ತಮ ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ ಎಂದು ಹಾರೈಸಿದರು.

ರಂಗ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಶಾಸಕರನ್ನು, ಸ್ಥಾಯಿ ಸಮಿತಿ ಅಧ್ಯಕ್ಷರನ್ನು, ದತ್ತ ನಗರ ನಿವಾಸಿಗಳ ಸಂಘದ ಪ್ರಮುಖರಾದ ಹಾಗೂ ಮಂಗಳೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಎಚ್. ಕೆ ಪುರುಷೋತ್ತಮ್ , ಮಾನಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಮಾನಪಾ ಸದಸ್ಯೆ ವನಿತಾ ಪ್ರಸಾದ್, ಅವರನ್ನು ಸನ್ಮಾನಿಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಲುವಾಗಿ ದತ್ತ ನಗರ ನಿವಾಸಿಗಳಿಂದ ಆಟೋ ಸ್ಪರ್ಧೆ ಶ್ರೀ ಕೃಷ್ಣ ವೇಶ ಸ್ಪರ್ಧೆ, ಹಾಗೂ ಕಾಸರಗೋಡಿನ ಶ್ರೀ ಸುಧಾಕರ ಕೋಟೆ ಅವರಿಂದ ಸೀತ ಕಲ್ಯಾಣ ಮತ್ತು ಭಕ್ತ ಸುಧಾಮ ಹರಿಕಥ ಸತ್ಸಂಗ ಜರಗಿತು.

ಕಾರ್ಯಕ್ರಮದಲ್ಲಿ ದತ್ತ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಆಳ್ವ ಸಂಚಾಲಕರಾದ ಪ್ರವೀಣ್ ಶೆಟ್ಟಿ ಕಾರ್ಯದರ್ಶಿ ರಾಜೇಶ್  ನಾಯ್ಕ್, ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮತ್ತು ಉಪಸ್ಥಿತರಿದ್ದರು.