ಕೆಲವು ಮರಿ ಪಕ್ಷಗಳೊಡನೆ ಸೇರಿ 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನ ಸಭೆಯಲ್ಲಿ 274 ಸ್ಥಾನ ಗೆದ್ದ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ. 1985ರ ಬಳಿಕ ಸತತ ಎರಡನೇ ಬಾರಿ ಮರಳಿ ಅಧಿಕಾರಕ್ಕೆ ಬಂದ ಸಾಧನೆ ಬಿಜೆಪಿಯದು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು 124 ಸ್ಥಾನ ಗೆದ್ದುದರ ಹೊರತಾಗಿ ಇತರ ಪಕ್ಷಗಳು ಲೆಕ್ಕಕ್ಕಿಲ್ಲವಾಗಿವೆ.
ಈ ರಾಜ್ಯದಿಂದ ಒಡೆದ ಉತ್ತರಾಖಂಡದಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. 2000ದಲ್ಲಿ ರಾಜ್ಯ ಹುಟ್ಟಿದ ಬಳಿಕ ಸತತ ಎರಡನೇ ಅವಧಿಗೆ ಗೆದ್ದ ಮೊದಲ ಕತೆಯಿದು. ಬಿಜೆಪಿ 48 ಮತ್ತು ಕಾಂಗ್ರೆಸ್ 18 ಕಡೆ ಗೆದ್ದಿವೆ.
ಮಣಿಪುರದಲ್ಲಿ ಖರೀದಿ ಸರಕಾರ ನಡೆಸಿದ್ದ ಬಿಜೆಪಿ ಈ ಬಾರಿ ಮೈತ್ರಿ ಜೊತೆಗೆ ನೇರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಮೈತ್ರಿ 32, ಕಾಂಗ್ರೆಸ್ 5 ಹಾಗೂ ಇತರರು 23 ಕ್ಷೇತ್ರಗಳಲ್ಲಿ ಜಯಿಸಿವೆ.
ಗೋವಾದಲ್ಲಿ ಎರಡು ಅವಧಿ ಖರೀದಿ ಸರಕಾರ ನಡೆಸಿದ ಬಿಜೆಪಿಗೆ ಈ ಬಾರಿ ಕೂಡ ಅದು ತಪ್ಪಿಲ್ಲ. ಆದರೆ ಅದು ಹೆಚ್ಚು ಎಂದರೆ 20 ಕಡೆ ಗೆದ್ದಿದೆ. ಕಾಂಗ್ರೆಸ್ 11 ಸ್ಥಾನ ಗಳಿಸಿತು.