92 ಕ್ಷೇತ್ರಗಳಲ್ಲಿ ಗೆದ್ದ ಆಮ್ ಆದ್ಮಿ ಪಕ್ಷವು ಪಂಜಾಬಿನಲ್ಲಿ ಕಾಂಗ್ರೆಸ್‌ಗೆ 18 ಕ್ಷೇತ್ರಗಳನ್ನಷ್ಟೆ ಉಳಿಸಿ ಇತರೆಲ್ಲ ಪಕ್ಷಗಳನ್ನು ಗುಡಿಸಿ ಹಾಕಿದೆ.
ದೆಹಲಿಯ ಭಾರೀ ವಿಜಯದ ಬಳಿಕ ಪಂಜಾಬಿನಲ್ಲಿ ಅಧಿಕಾರ ಸ್ಥಾಪಿಸಿದ ಎಎಪಿ ಮುಂದಿನ ಗುರಿ ಗೋವಾ. ಈ ಬಾರಿ ಅಲ್ಲಿ ಅದು 2 ಸ್ಥಾನ ಗೆದ್ದಿದೆ. ಹಾಸ್ಯ ನಟ ಭಗವಂತ ಮಾನ್ ಅವರು ಗಂಭೀರ ಮುಖ್ಯಮಂತ್ರಿ ಎನ್ನುವ ಸೂಚನೆಯನ್ನು ಈಗಾಗಲೆ ನೀಡಿದ್ದಾರೆ. ಅರವಿಂದ ಕೇಜ್ರೀವಾಲ್ ರಾಜಕೀಯ ಶಕ್ತಿಯಾಗಿ ಬೇರೂರುತ್ತಿರುವುದು ಸ್ಪಷ್ಟ.