ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿರುವುದು ಜನಾದೇಶದಿಂದಲ್ಲ. ಮತಯಂತ್ರಗಳು ಮತ್ತು ಕೇಂದ್ರೀಯ ಏಜೆನ್ಸಿಗಳ ದುರುಪಯೋಗದಿಂದ ಎಂದು ಪಡುವಣ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೊಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಮತದಾನ ಮಾಡಿದ ಮತಯಂತ್ರಗಳೇ ಎಣಿಕೆಗೆ ಬಂದಿವೆಯೇ ಎಂಬುದನ್ನು ತಿಳಿಯಲು ಮತಯಂತ್ರಗಳ ಫೊರೆನ್ಸಿಕ್ ಪರೀಕ್ಷೆ ಅಗಬೇಕು. ಮತಯಂತ್ರ ದುರ್ಬಳಕೆ ಮಾಡಿದ ಪ್ರಧಾನಿ ಕ್ಷೇತ್ರದ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಿರುವುದು ಸಣ್ಣ ವಿಷಯವಲ್ಲ. ಅಖಿಲೇಶ್‌ ಸಿಂಗ್ ಯಾದವ್ ಅವರನ್ನು ವಂಚಿಸಲಾಗಿದೆ. ಆದರೆ ಪ್ರತಿಪಕ್ಷಗಳು ಮುಂದೆಯಾದರೂ ಒಗ್ಗೂಡಿ ಹೋರಾಡಬೇಕು ಎಂದು ಅವರು ಹೇಳಿದರು.