ಕಟೀಲು: ಕಿನ್ನಿಗೋಳಿಯಿಂದ ಉಲ್ಲಂಜೆ ಕಟೀಲು ಹೆದ್ದಾರಿಯಲ್ಲಿ ಬಸ್ಸು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ಉಲ್ಲಂಜೆ ನಿವಾಸಿ  ಚರಣ್ (15)  ಎಂದು ಗುರುತಿಸಲಾಗಿದೆ.

 ಚರಣ್ (15)

ಮೃತ ಬಾಲಕ ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಬರುತ್ತಿದ್ದಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ನಂದಿನಿ ಬಸ್ಸು ಉಲ್ಲಂಜೆ ಜುಮಾದಿ ಗುಡ್ಡೆ ತಿರುವು ಬಳಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತ ರಭಸಕ್ಕೆ ಬಾಲಕ ಸ್ಥಳದಲ್ಲಿ ಮೃತಪಟ್ಟಿದ್ದು ಸ್ಥಳಕ್ಕೆ ಪೊಲೀಸರು ಮತ್ತು ಟ್ರಾಫಿಕ್ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತ ಚರಣ್ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕಾರ್ಯಕರ್ತನಾಗಿದ್ದು ಅಪಘಾತ ಸ್ಥಳದಲ್ಲಿ ಶಾಲಾ ಸಹಪಾಠಿಗಳು ಶಿಕ್ಷಕರು ಹಾಗೂ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು

ಮೃತ ಚರಣ್  ತಂದೆ ಗಣೇಶ, ತಾಯಿ,ಅಕ್ಕ ಅಣ್ಣ ನನ್ನು ಅಗಲಿದ್ದಾರೆ

ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.