ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಸಿಯೋಮ್ ನದಿಯ ಮೇಲೆ ಬೋಲೆಂಗ್ ಬಳಿ 100 ಮೀಟರ್ ಉದ್ದದ ಸಿಯೋಮ್ ಸೇತುವೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಸೆಂಬರ್ 3ರ ಮಂಗಳವಾರ ಉದ್ಘಾಟನೆ ಮಾಡಿದರು.

Photo Credit: TimesofIndia

ಇದೇ ಸಂದರ್ಭದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಜೇಶನ್ನಿನ ಇನ್ನೂ 27 ಯೋಜನೆಗಳನ್ನು ರಕ್ಷಣಾ ಮಂತ್ರಿಗಳು ದಿಟಸಮ (ವರ್ಚ್ಯುಯಲ್) ಕ್ರಮದಲ್ಲಿ ಉದ್ಘಾಟನೆ ಮಾಡಿದರು.

ಅದರಲ್ಲಿ ಅರುಣಾಚಲ ಪ್ರದೇಶ, ಮಿಜೋರಾಂ, ಲಡಾಖ್‌ನ ಮೂರು ದೂರ ಮದ್ದು ಬಲೆ ನೆಲೆ (ಟೆಲಿಮೆಡಿಸನ್ ನೂಡ್) ಸಹ ಸೇರಿವೆ. ಸೈನಿಕರು ಹಾಗೂ ಸ್ಥಳೀಯರಿಗೆ ದೂರ ಸಂಪರ್ಕ ರೋಗ ನಿರ್ಣಯದ ಮೂಲಕ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇವೆ ಇದರಿಂದ ಲಭ್ಯ ಎಂದು ಅವರು ತಿಳಿಸಿದರು.

ತವಾಂಗ್‌ನಲ್ಲಿ ಭಾರತ ಮತ್ತು ಚೀನೀ ಸೈನಿಕರು ಕೈ ಮಿಲಾಯಿಸಿದ ಒಂದು ತಿಂಗಳ ಬಳಿಕ ಅರುಣಾಚಲ ಪ್ರದೇಶಕ್ಕೆ ಬಂದ ಗಡಿ ಗೆರೆ ಸಮೀಪದ ಯೋಜನೆ ತೆರೆದಿಟ್ಟರು. ಅದೇ ನಾವು ಯುದ್ಧ ವಿರೋಧಿಗಳು ಎಂದೂ ಅವರು ಹೇಳಿದರು.