ಮೆಹಂದಿ ಕುಣಿತದಲ್ಲಿ ವಧು ಕುಣಿಯುವಾಗ ಸಂಬಂಧಿಯೊಬ್ಬ ಕೈಹಿಡಿದ ಎಂದು ವರ ಹೊಡೆದುದರಿಂ ವಧು ಅವನನ್ನು ನಿರಾಕರಿಸಿ ಅಲ್ಲೇ, ಅಂದೇ ಸೋದರ ಸಂಬಂಧಿಯನ್ನು ಮದುವೆಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

ಪನ್ರುಟಿಯ ವಧು ಮತ್ತು ಪೆರಿಯಕುಟ್ಟುಪಾಳ್ಯದ ವರನಿಗೆ ನವೆಂಬರ್ 21ರಂದು ಮದುವೆ ನಿಶ್ಚಿತಾರ್ಥ ಆಗಿತ್ತು. ಜನವರಿ 20 ಮದುವೆ. 19ರ ಸಂಜೆ ಮೆಹಂದಿ ಕುಣಿತ ನಡೆದಿತ್ತು. ವಧುವೂ ಕುಣಿದಳು. ನಡುವೆ ಸೋದರ ಸಂಬಂಧಿ ಬಂದು ಆಕೆಯ ಕೈ ಹಿಡಿದ ಎಂದು ವರ ಆಕೆಯ ಕೆನ್ನೆಗೆ ಬಾರಿಸಿದ. ವಧು ತಿರುಗಿ ಬಾರಿಸಿದಳು.

ಸ್ಥಳದಲ್ಲೇ ಮದುಮಗಳು ಮತ್ತು ವಧುವಿನ ತಂದೆ ಈ ವರ ಬೇಡ ಎಂದರು. ಮದುವೆ ನಿಶ್ಚಿತ ದಿನದಂದು ಸೋದರ ಸಂಬಂಧಿಯ ಜೊತೆ ನಡೆಯಿತು. ಎರಡೂ ಕಡೆಯವರು ನಷ್ಟ, ಹಲ್ಲೆ ಎಂದು ಪೋಲೀಸು ಠಾಣೆ ಏರಿದ್ದಾರೆ. ಉದ್ಯಮಿಗಳಾದ್ದರಿಂದ ಪೋಲೀಸರಿಗೆ ತೊಂದರೆ ಇಲ್ಲ.