ಬ್ರಹ್ಮಶ್ರೀ   ನಾರಾಯಣ ಗುರುಗಳ ಸ್ತಬ್ಧ ಚಿತ್ರ ವನ್ನು ಕೊಂಡ್ರೆ ರಕ್ಷಣಾ ಸಚವಾಲಯವು ನಿರಾಕರಣೆ ಮಾಡಿದ್ದನ್ನು ಸರಿಪಡಿಸಲು ರಾಜ್ಯದ ಡಬ್ಬಲ್ ಎಂಜಿನ್ ಸರಕಾರವು ವಿಫಲ ಗೊಂಡಿದೆ. ಅದಕ್ಕಾಗಿ ನಾರಾಯಣ ಗುರುಗಳಿಗೆ ಅವಮಾನವಾಗಿದೆ ಎಂಬ ಕೂಗು ಬಂದಾಗ ರಾಜ್ಯ ಸರಕಾರದಲ್ಲಿ ಪ್ರಭಾವಿ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ಅವರು ಅದನ್ನು ಸರಿಪಡಿಸುದನ್ನು ಬಿಟ್ಟು,  ಅದರ ಬದಲು ಸರಕಾರ 2023  ಕ್ಕೇ ಪ್ರದರ್ಶನ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಹೇಳಿರುವುದು ತಪ್ಪು ಆಗಿದೆ ಎಂದು ಒಪ್ಪಿಕೊಂಡು ಆಗಿದೆ. ಈ ತಪ್ಪು ಕೂಡಲೇ ಸರಿಪಡಿಸಿ,  ಇನ್ನೂ ಸಮಯ ಮಿಂಚಿಲ್ಲ ಎಂದು ಎ ಐಸಿಸಿ   ಕಾರ್ಯದರ್ಶಿ ಶ್ರೀ ಐವನ್ ಡಿಸೋಜ ರವರು ಸಚಿವರನ್ನು ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಯವರು ದಸರಾ   ಉದ್ಘಟನೆಗೆ ಸಿದ್ಧ ರಾಮಯ್ಯವರನ್ನು ಆಹ್ವಾನಿಸಿದಾಗ  ತಪ್ಪಿಸಿದವರು ಯಾರು ಎಂದು , ನನ್ನ ಹೆಸರು ಉಲ್ಲೇಖ ಮಾಡಿ ಎಂದು ಕೇಳಿದ್ದಾರೆ. ಆದರೆ ಸಿದ್ಧರಾಮಯ್ಯ ನವರು ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದವರು , ಅವರಿಗೆ ಹೋಗಬೇಡಿ ಎಂದು ಹೇಳುವ ಶಕ್ತಿ ನನಗೆ ಇರಲಿಲ್ಲ. ಅವರು ಮಂಗಳೂರಿಗೆ ಬಂದಾಗ  ನನ್ನ ಪಕ್ಷದ ಎಲ್ಲಾ ಮಂತ್ರಿಗಳು, ಶಾಸಕರುಗಳು, ಇದ್ದರು. ಶ್ರೀನಿವಾಸ ಪೂಜಾರಿ ಯವರಿಗೆ, ಸಿದ್ದರಾಮಯ್ಯರ ಬಳಿ  ಕೇಳುವ ಎಲ್ಲಾ  ಅಧಿಕಾರ ಇದೆ. ರಾಜ್ಯ ವಿಧಾನ ಸೌಧದಲ್ಲಿ ಇದ್ದಿರಿ, ನೀವು ಅವರ ಕೇಳಿ, ಅಲ್ಲದಿದ್ದರೆ ನಮ್ಮ ಪಕ್ಷದ ಎಲ್ಲಾ ನಾಯಕರು,  ಶಾಸಕರು ಬಳಿ ಕೇಳಿ ಉತ್ತರ ಪಡೆದುಕೊಳ್ಳಿ, ಅದನ್ನು ಬಿಟ್ಟು ವಿಧಿಯಾಂತರ ಮಾಡಬೇಡಿ,  ನಿಮ್ಮ ಸರಕಾರ ನಾರಾಯಣ ಗುರುಗಳಿಗೆ ಮಾಡಿದ ಅವಮಾನವನ್ನು ಸರಿಪಡಿಸಲು ನಮ್ಮ ಹೋರಾಟವೇ ಹೊರತು ರಾಜಕೀಯ ಕ್ಕಾಗಿ ಅಲ್ಲ.  ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕೇಂದ್ರ ಸರಕಾರ  ಮಾಡಿದ  ತಪ್ಪಿನಿಂದಾಗಿ  ಈ ಸಮಸ್ಯೆ ಉದ್ಭವಿಸಿದ್ದು, ನಿಮ್ಮ ಹಲವು ನಾಯಕರು, ಹಲವು ರೀತಿಯ ಸುಳ್ಳು ಉತ್ತರವನ್ನು ನೀಡಿ, ನಾರಾಯಣ ಗುರುಗಳ ಅನುಯಾಯಿಗಳಿಗೆ ನೋವು ಉಂಟು ಮಾಡಿರುವುದು ಕೋಟ ಶ್ರೀನಿವಾಸ್ ಪೂಜಾರಿ ಯವರು ತಿಳಿಯಬೇಕಾಗಿದೆ. ತಪ್ಪನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳದೇ, 2023 ಕೇ ರಾಜ್ಯದಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ವನ್ನು ಕಳುಹಿಸಲು ನಿರ್ಧಿಸಿರುವುದು ಎಂದು ಹೇಳಿರುವುದು,   ಈ ಹಿಂದೆ ತಮ್ಮ ಪಕ್ಷ ಪ್ರತಿಪಾದನೆ ಮಾಡಿದ ಕಾನೂನುಗಳು  ತೊಡಕು  ಆಗಲಿದೆ ಎಂದು ತಿಳಿಯಬೇಕು. ಈ ವರ್ಷ ಕರ್ನಾಟಕದಿಂದ ಈಗಾಗಲೇ ಸ್ತಬ್ಧ ಚಿತ್ರ ಪ್ರದರ್ಶನ ಕೇ ಸಮ್ಮತಿಸಿದೆ ಎಂದು ನೆನಪಿರಲಿ.