ಇಂಗ್ಲೆಂಡಿನಲ್ಲಿ ರೈಲ್ವೆಯ ಆರ್‌ಎಂಟಿ ಸಂಘಟನೆಯು ರೈಲು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಕೆಲವೇ ಕೆಲವು ರೈಲುಗಳು ಮಾತ್ರ ಓಡುತ್ತಿವೆ.

ಸೋಮವಾರ ಸಣ್ಣಗೆ ಆರಂಭವಾದ ಮುಷ್ಕರದಲ್ಲಿ 50,000 ನೌಕರರೂ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಶನಿವಾರದವರೆಗೆ ಮುಷ್ಕರ ಮುಂದುವರಿಯಲಿದೆ. ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿಲ್ಲ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಸಂಬಳ ಏರಿಕೆ ಉದ್ಯೋಗಿಗಳ ಮೊದಲ ಬೇಡಿಕೆಯಾಗಿದೆ.