ಮಂಗಳೂರಿನ ಹಳೆಯ ಕೆರೆಗಳಲ್ಲಿ ಕುಡ್ತೇರಿ ಮಹಾಮಾಯಾ ದೇವಾಲಯಕ್ಕೆ ಸೇರಿದ ಈ ಕೆರೆಯೂ ಒಂದು.
ವಿಶಾಲವಾದ ಮತ್ತು ಆಳವಾದ ಈ ಕೆರೆಯು ಮಳೆಗಾಲದಲ್ಲಿ ತುಂಬಿಕೊಂಡರೆ, ಬೇಸಿಗೆ ಕಾಲದಲ್ಲಿ ತಳ ಕಾಣುತ್ತದೆ.
ಇತ್ತೀಚಿನ ವರುಷಗಳಲ್ಲಿ ಈ ಕೆರೆಯ ಅಂಚು ಕೆಲವೆಡೆ ಕುಸಿದಿತ್ತು. ತಳದಲ್ಲಿ ಹೂಳು ತುಂಬಿತ್ತು. ಈ ವರುಷದ ಮೇ ತಿಂಗಳಲ್ಲಿ ಹೂಳು ಮತ್ತು ಕಸ ಎಲ್ಲ ತೆಗೆದಿದ್ದಾರೆ. ಅಲ್ಲಿ ಇಲ್ಲಿ ಖಿಲವಾದ ಕೆರೆಯ ದಂಡೆಯನ್ನು ಸಾಕಷ್ಟು ರಿಪೇರಿ ಮಾಡಿದ್ದಾರೆ.
ವಾರದ ಮಳೆಗೆ ನೀರು ಕೂಡ ಒಂದಷ್ಟು ತುಂಬಿದೆ. ಆದಷ್ಟು ಶುದ್ಧೀಕರಣ ಆದ ಕೆರೆಯ ನೀರಿನಲ್ಲಿ ಆಮೆಯೊಂದು ಸಂತೋಷದಿಂದ ಈಜುತ್ತಿತ್ತು.
ಹಿಂದೆ ಇಲ್ಲಿ ಒಂದಷ್ಟು ಬಾತುಕೋಳಿಗಳು ಈಜಾಡುತ್ತಿದ್ದವು. ಹೊಸತಾಗಿಸಿದ ಕೆರೆಯಲ್ಲಿ ಸದ್ಯ ಅವು ಕಾಣಲಿಲ್ಲ.
Article By
Perooru Jaru