ಉಡುಪಿ: ಚೈಲ್ಡ್ ಲೈನ್-1098, ಉಡುಪಿಯ 3ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯುಟ್ಯೂಬ್ ಚಾನಲ್‍ಗೆ ಚಾಲನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಚೈಲ್ಡ್ ಲೈನ್ 1098 ಉಡುಪಿಯ ನೂತನ ಯುಟ್ಯೂಬ್ ಚಾನಲ್‍ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶರ್ಮಿಳಾ ಎಸ್. ರವರು ಚಾಲನೆಯನ್ನು ನೀಡಿ ಶುಭ ಹಾರೈಸಿದರು. 

ನಂತರ ಚೈಲ್ಡ್ ಲೈನ್-1098, ಉಡುಪಿಯ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಯುತ ಬಿ. ಕೆ. ನಾರಾಯಣ್, ರೋಟರಿಯ ಉಡುಪಿಯ ಅಧ್ಯಕ್ಷರಾದ ಶ್ರೀಯುತ ಹೇಮಂತ್ ಯು. ಕಾಂತ್ ಹಾಗೂ ಶ್ರೀ ಕೃಷ್ಣ ರೋಟರ್ಯಾಕ್ಟ್ ಕ್ಲಬ್‍ನ ನಿಕಟ ಪೂರ್ವ ಅಧ್ಯಕ್ಷರಾದ ಕು. ಶುೃತಿ ಶೆಣೈ ಯವರನ್ನು ಚೈಲ್ಡ್ ಲೈನ್-1098, ಉಡುಪಿಯ ವತಿಯಿಂದ ಗೌರವಿಸÀಲಾಯಿತು. 

ನಂತರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶರ್ಮೀಳಾ ಎಸ್, ರೋಟರಿ ಉಡುಪಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಧಿಕಾ ಲಕ್ಷ್ಮೀ ನಾರಾಯಣ್, ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾರತ್ನ, ಶ್ರೀ ಕೃಷ್ಣ ಬಾಲನಿಕೇತನದ ಮಾತಾಜಿಯವರಾದ ಕು. ಶಕುಂತಲಾ ಮತ್ತು ಕು. ಶಿವಲೀಲಾರವರನ್ನು ಚೈಲ್ಡ್ ಲೈನ್-1098, ಉಡುಪಿಯ ವತಿಯಿಂದ ಗೌರವಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಬಾಲನಿಕೇತನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ಪ್ರೋ. ಕೆ.ಕಮಲಾಕ್ಷ, ಸದಸ್ಯರಾದ ಶ್ರೀಯುತ ಗುರುರಾಜ್ ಸನಿಲ್, ಶ್ರೀಮತಿ ಸುಹಾನಿ ಕಾಮತ್, ಶ್ರೀಮತಿ ಶ್ಯಾಮಲ ಪ್ರಸಾದ್ ಹಾಗೂ ರೋಟರಿ ಉಡುಪಿ ಕಾರ್ಯದರ್ಶಿಯವರಾದ ಶ್ರೀಯುತ ಜೆ. ಗೋಪಾಲಕೃಷ್ಣ ಪ್ರಭು, ಸದಸ್ಯರಾದ ಶ್ರೀಯುತ ಸುರೇಶ್ ಶೆಣೈ, ಶ್ರೀಯುತ ಸುಬ್ರಮಣ್ಯ ಕಾರಂತ್, ಶ್ರೀಯುತ ಬಿ.ವಿ.ಲಕ್ಷ್ಮೀ ನಾರಾಯಣ್, ಶ್ರೀಯುತ ಜನಾರ್ಧನ ಭಟ್, ಸ್ಥಳಿಯ ಶಾಲಾ ಶಿಕ್ಷಕರು ಮತ್ತು ಚೈಲ್ಡ್ ಲೈನ್-1098, ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಚೈಲ್ಡ್ ಲೈನ್-1098, ಉಡುಪಿಯ ನಿರ್ದೇಶಕರಾದ ಶ್ರೀಯುತ ರಾಮಚಂದ್ರ ಉಪಾಧ್ಯಾಯರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.