ಬಜೆಟ್ ಚರ್ಚೆಯ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿ ಜೆ. ಸಿ. ಮಾಧುಸ್ವಾಮಿಯವರು ಗುಜರಾತ್ ಮತ್ತು ರಾಜಸ್ತಾನಗಳು ದೇಶದ ಅತಿ ಹಿಂದುಳಿದ ರಾಜ್ಯಗಳು.

ಹಾಗಾದರೆ ಗುಜರಾತ್ ಮಾದರಿ ಎಂದೆಲ್ಲ ಹೇಳಿದ್ದು ಬುರುಡೆಯೇ‌ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಪ್ರಶ್ನಿಸಿದರು.

ರಾಜ್ಯಕ್ಕೆ ಅನುದಾನ ಕಡಿಮೆ ಮಾಡಿರುವ ಕೇಂದ್ರವನ್ನು ತಾಜಾ ಮಾಡಲು ಬಜೆಟ್‌ನಲ್ಲಿ ರಾಜಸ್ವ ಕಡಿಮೆ ತೋರಿಸಲಾಗಿದೆಯೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಹಿಂದುಳಿದ ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ತಾನದಂತಾ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಬೇಕಾಗಿರುವುದರಿಂದ ಕರ್ನಾಟಕಕ್ಕೆ ಕಡಿಮೆ ಅನುದಾನ ಕಡಿಮೆ ಆಗಿದೆ ಎಂದರು ಮಂತ್ರಿಗಳು.