ಕಿನ್ನಿಗೋಳಿ: ದಾಮಸ್ ಕಟ್ಟೆ ಕಿರೆಂ ರೆಮೆದಿ ಅಮ್ಮನವರ ದೇವಾಲಯದಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಂದು ಐಕಳ ಬಾವ ತಾಳಿಪಾಡಿಗುತ್ತು, ಏಳಿಂಜೆ ಅಂಗಡಿಗುತ್ತಿನವರಿಗೆ ಅಡಿಕೆ ವೀಳ್ಯದೆಲೆ ಹಾಗೂ ಬಾಳೆಗೊನೆ ನೀಡುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾಯಿತು.

1784 ರಲ್ಲಿ  ಟಿಪ್ಪು ಸುಲ್ತಾನ್ ಕರಾವಳಿಯ ಕೆಲವು ಕ್ರೈಸ್ತರ ಹಾಗೂ ದೇವಾಲಯಗಳ  ಮೇಲೆ ದಾಳಿ ನಡೆಸಿದ್ದಾಗ ದಾಮಸ್ ಕಟ್ಟೆ ಕಿರೆಂ ರಮೆದಿ ಅಮ್ಮನವರ ದೇವಾಲಯದ ಕಡೆ ದಾಳಿ ನಡೆಸಲು ಬಂದ ಸಂಧರ್ಭ ಸ್ಧಳೀಯ ಮೂರು ಬಂಟ ಮನೆತನದವರು ದೇವಾಲಯವನ್ನು ರಕ್ಷಿಸಿದ್ದರು. ಅದರ ಪ್ರತೀಕವಾಗಿ ಐಕಳಬಾವ, ತಾಳಿಪಾಡಿಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಿಗೆ ಸಂಪ್ರದಾಯದಂತೆ ಪ್ರತಿ ವರ್ಷ ವಾರ್ಷಿಕ ಹಬ್ಬದಂದು  ಅಡಿಕೆ ವೀಳ್ಯದೆಲೆ ಹಾಗೂ ಬಾಳೆಗೊನೆಯನ್ನು ನೀಡಿ ಗೌರವಿಸಲಾಗುತ್ತಿದೆ.

ಐಕಳ ಬಾವ ಸುಕುಮಾರ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಜಯಪಾಲ ಶೆಟ್ಟಿ ತಾಳಿಪಾಡಿಗುತ್ತು ದಿನೇಶ್ ಭಂಡ್ರಿಯಾಲ್  ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ ಶಂಭುಶೆಟ್ಟಿ   ಮುಂತಾದ ಬಂಟ ಮನೆತನದವರು ಗೌರವ ಸ್ವೀಕರಿಸಿದರು‌‌. ಫಾ ಓಸ್ವಲ್ಡ್ ಮೊಂತೆರೋ ರೋಹನ್ ಡಿಕೋಸ್ಟಾ ಜೇಮ್ಸ್ ಲೋಬೋ ಪೌಲ್ ಮಿರಾಂದ ಮಾಕ್ಸಿಮ್ ಪಿಂಟೋ  ವಿಲ್ಫ್ರೆಡ್ ಮೋನಿಸ್ ಮತ್ತಿತರರು ಉಪಸ್ಥಿತರಿದ್ದರು