ಮಂಗಳೂರು: ಕ್ರಿಸ್ಮಸ್ ಎಂದರೆ ಹೊರ ಸಂಭ್ರಮವಲ್ಲ. ಸಮಾಜಮುಖಿ, ದುಃಖಿತ ಸಮಾಜದ ಕಣ್ಣೀರು ಒರೆಸುವ ಮೂಲಕ ಆಚರಣೆ ಮಾಡುವುದೇ ಕ್ರಿಸ್ಮಸ್ ಎಂಬ ಆರಂಭದ ನುಡಿಯೊಡನೆ ಮಂಗಳೂರು ಧರ್ಮ ಪ್ರಾಂತ್ಯದ ಕ್ರಿಸ್ಮಸ್ ಸಂದೇಶ ಆರಂಭವಾಯಿತು.

ಅನಂತರ ಬಿಶಪ್ ಅವರು ಕೇಕ್ ಕತ್ತರಿಸಿದರು. ಕೇಕ್ ಎಲ್ಲರ ಆಹಾರ, ಸಸ್ಯಾಹಾರಿ, ಮಾಂಸಾಹಾರಿ, ಮಿಶ್ರಾಹಾರಿ ಎಲ್ಲವೂ ಅದರಿಂದ ಸಾಧ್ಯ ಎಂದು ಆಶಿಸಲಾಯಿತು.


ಧರ್ಮಾಧ್ಯಕ್ಷರಾದ ವಂದನೀಯ ಪೀಟರ್ ಸಲ್ಡಾನಾ ಅವರು ಮಾತನಾಡಿ, ಕ್ರಿಸ್ಮಸ್‌ನ ಮುಖ್ಯ ಸಂದೇಶ ನೀವೆಲ್ಲ ಬದುಕಬೇಕು ಎನ್ನುವುದಾಗಿದೆ. ಪ್ರೀತಿ ಮರೆತ ಉದಾಸೀನತೆ ಇಂದು ಎಲ್ಲೆಡೆ ಕಾಣುತ್ತಿದೆ. ಇದು ಸಾವಿಗೆ ಸಮ. ಯೇಸುವಿನ ಕರುಣೆ, ಕ್ಷಮಾಗುಣ, ಸಹಾಯ ಗುಣವನ್ನು ಎತ್ತಿ ತೋರಿಸುವುದೇ ಕ್ರಿಸ್ಮಸ್. ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ಅವರು ಸಲ್ಲಿಸಿದರು.

ಕೊರೋನಾ ನಿಯಮಾವಳಿ ಪ್ರಕಾರ ಇಗರ್ಜಿಗಳಲ್ಲೇ ಕ್ರಿಸ್ಮಸ್ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್‌ ಕಾರಣಕ್ಕೆ ನಡೆಯುವುದಿಲ್ಲ ಎಂದೂ ಅವರು ಹೇಳಿದರು.