ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೀನುಗಾರನೊಬ್ಬನನ್ನು ತಲೆ ಕೆಳಗಾಗಿ ನೇತಾಡಿಸಿ ಹಿಂಸಿಸಿದ ಸಂಬಂಧ ಆರು ಜನರನ್ನು ಬಂಧಿಸಿರುವ ಮಾಹಿತಿಯನ್ನು ಕಮಿಶನರ್ ಶಶಿಕುಮಾರ್ ಅವರು ನೀಡಿದ್ದಾರೆ.
ಪಾಂಡೇಶ್ವರ ಪೋಲೀಸರು ಆರು ಮಂದಿ ವಿರುದ್ಧ ಕೊಲೆ ಪ್ರಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಮೊಬಾಯಿಲ್ ಕಳವಾದ ಬಗೆಗೆ ಸಂಶಯದ ಮೇಲೆ ವೈಲ ಸೀನು ಎಂಬವನನ್ನು ಬೋಟಿನಲ್ಲಿ ಕಾಲಿಗೆ ಹುಕ್ ಕಟ್ಟಿ ನೇತಾಡಿಸಿದ್ದರು.
23ರ ಕೊಂಡೂರು ಪೋಲಯ್ಯ, 26ರ ಅಮಲರಾಜ, 21ರ ಕಾಟಂಗರಿ ಮನೋಹರ್ 30ರ ವುಟುಕೋರಿ ಜಾಲಯ್ಯ, 27ರ ಕರ್ದಿಂಗಾರಿ ರವಿ, 40ರ ಪ್ರಳಯಕಾವೇರಿ ಗೋವಿಂದ ಬಂಧಿತರು. ಎಲ್ಲ ಮೀನುಗಾರರು ಆಂಧ್ರ ಮೂಲದವರು.