ಮಂಗಳೂರು: 203-ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಜೆ. ಆರ್ .ಲೋಬೊರವರ ಪರವಾಗಿ 41 ನೇ ಸೆಂಟ್ರಲ್ ವಾರ್ಡ್ ನ ಬೂತ್ ನಂಬ್ರ 124 ರಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರೂ ಹಾಗೂ ವೀಕ್ಷಕರೂ ಆಗಿರುವ ವಿಶ್ವಾಸ್ ಕುಮಾರ್ ದಾಸ್ ರವರು  ಮತಯಾಚನೆ ಮಾಡಿದರು. ಈ ಸಂಧರ್ಭದಲ್ಲಿ  ರಾಜ್ಯ ಮಹಿಳಾ ಕಾಂಗ್ರೆಸ್ ವೀಕ್ಷಕರಾದ ಚಂದ್ರಕಲಾ ಡಿ ರಾವ್, ವಾರ್ಡ್ ಅಧ್ಯಕ್ಷರಾದ ಶಾಂತಲಾ ಗಟ್ಟಿ, ಶ್ರೀಕಾಂತ್, ಅನಿತಾ ಲೋಕೇಶ್, ತೇಜಸ್, ತೃಪ್ತಿ, ಸಬೀತಾ, ನಾಗವೇಣಿ, ದಿನೇಶ್ ಶೆಟ್ಟಿ, ವಸಂತಿ, ಗೋಪಾಲ್  ಮುಂತಾದವರು ಉಪಸ್ಥಿತರಿದ್ದರು.