ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ 10ನೇ ತರಗತಿಯ 3 ವಿಭಾಗದ ವಿದ್ಯಾರ್ಥಿಗಳಿಗೆ ಗ್ರಾಹಕ ಶಿಕ್ಷಣ ತರಬೇತಿ ಸೆಪ್ಟೆಂಬರ್ ಹತ್ತರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಯಿ ರಾಜಕುಮಾರ ಮೂಡುಬಿದಿರೆ ಅವರು ಆಗಮಿಸಿದ್ದರು.
ಅವರು ತಮ್ಮ ಭಾಷಣದಲ್ಲಿ ಗ್ರಾಹಕ ತನ್ನ ಜವಾಬ್ದಾರಿಗಳನ್ನು ತಿಳಿದುಕೊಂಡಲ್ಲಿ ಬದುಕಿನಲ್ಲಿ ಸಾಕಷ್ಟು ಶ್ರೇಯಸ್ಸನ್ನು ಪಡೆಯುವುದಕ್ಕೆ ಇರುವ ಹಲವಾರು ಮಾರ್ಗಗಳನ್ನು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ರಾಷ್ಟ್ರೀಯ ಗ್ರಾಹಕ ದಿನಾಚರಣೆ, ವಿಶ್ವ ಗ್ರಾಹಕ ದಿನಾಚರಣೆಯ ಮಹತ್ವಗಳನ್ನು ತಿಳಿಸಿಕೊಟ್ಟರು. ಕಚೇರಿಗಳಿಂದ ಮಾಹಿತಿಯನ್ನು ಪಡೆಯುವುದಕ್ಕೆ ಇರುವ ಕ್ರಮವನ್ನು ಮನವರಿಕೆ ಮಾಡಿದರು.
ವಿದ್ಯಾಲಯದ ಹಿರಿಯ ಶಿಕ್ಷಕ ಲಕ್ಷ್ಮೀಶ ಅವರು ಸ್ವಾಗತಿಸಿ ವಂದಿಸಿದರು.