ಉಪ್ಪಿನಂಗಡಿ : ಸ್ಥಳೀಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 10ರಂದು ಗ್ರಾಹಕ ಶಿಕ್ಷಣ ತರಬೇತಿಯನ್ನು ನೀಡಲಾಯಿತು. ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ ರಾಯಿ ರಾಜಕುಮಾರ ಮೂಡುಬಿದಿರೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. 

ಅವರ ತಮ್ಮ ಗ್ರಾಹಕ ಶಿಕ್ಷಣ ತರಬೇತಿಯಲ್ಲಿ ಗ್ರಾಹಕ ಯಾರು, ಆತನ ಜವಾಬ್ದಾರಿಗಳು ಏನು, ಆತನಿಗಿರುವ ಹಕ್ಕುಗಳು ಯಾವುವು, ಯಾವುದೇ ತೊಂದರೆಗಳು ಆದಾಗ ಪರಿಹಾರಕ್ಕಾಗಿ ಇರುವ ಅವಕಾಶಗಳು ಇತ್ಯಾದಿ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅದೇ ರೀತಿ ಅಗತ್ಯ ಇರುವ ಮಾಹಿತಿಯನ್ನು ಕಚೇರಿಗಳಿಂದ ಪಡೆಯುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 

ಪುತ್ತೂರು ವಿವೇಕಾನಂದ ಸಂಸ್ಥೆಯ ಅಧೀನಕ್ಕೆ ಒಳಪಟ್ಟ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲೆ ವೀಣಾ ಪ್ರಸಾದ್ ಅವರು ಸ್ವಾಗತಿಸಿದರು. ಶಿಕ್ಷಕಿ ಯಶಕುಮಾರಿ ವಂದಿಸಿದರು.