ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಮಹಿಳಾ ಮಂಡಲ (ರಿ) ಕುಳಾಯಿ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ  ಉಚಿತ ಹೊಲಿಗೆ ತರಬೇತಿ ಶಿಬಿರವನ್ನು  ಉದ್ಘಾಟನೆ ಕಾರ್ಯಕ್ರಮವು 13.12.2021 ಗುರುವಾರ  ಕುಳಾಯಿ   ಮಹಿಳಾ ಮಂಡಲದಲ್ಲಿ ಜರುಗಿತು. ಕಾರ್ಯಕ್ರಮ ವನ್ನು  ವಕೀಲೆ  ಜಯಶ್ರೀ ರಟ್ಟಿಹಳ್ಳಿ,ಉದ್ಘಾಟಿಸಿ ಮಾತನಾಡಿ  ನಾವು ಮಾಡುವ ಯಾವುದೇ ಕೆಲಸವೂ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಿದ್ದರೆ ಯಶಸ್ಸು ಖಂಡಿತ, ಬೇರೆಯವರ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.  

ಮುಖ್ಯ ಅತಿಥಿಯಾಗಿ ಮಂಗಳೂರು   ನೆಹರೂ ಯುವ ಕೇಂದ್ರ  ಜಿಲ್ಲಾ ಸಮನ್ವಯಾಧಿಕಾರಿ  ರಘುವೀರ್ ಸೂಟರ್ ಪೇಟೆ  ಮಾತನಾಡಿ ಕುಳಾಯಿ ಮಹಿಳಾ ಮಂಡಲ ನಿರಂತರ ಸಮಾಜಮುಖಿ  ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು,  ತುಂಬಾ ಜನರಿಗೆ ಸಹಾಯ ಹಸ್ತ ಚಾಚಿದೆ.  ಎಂದು ಅಭಿನಂದಿಸಿದರು. 

ಇನ್ನು ಮುಂಬರುವ ದಿನಗಳಲ್ಲಿ,  ಸ್ವ ಉದ್ಯೋಗ, ಸ್ವಾವಲಂಬಿ ಜೀವನದ ಬಗ್ಗೆ ಇಲಾಖೆಯ ವತಿಯಿಂದ  ಹೆಚ್ಚಿನ ಸಲಹೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ   ಮಂಗಳೂರು ಮಹಾನಗರ ಪಾಲಿಕೆಯ 9ನೇ ವಾರ್ಡಿನ ಸದಸ್ಯರಾದ  ವೇದಾವತಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಶುಭಕೋರಿದರು.    

ಮಹಿಳಾ ಮಂಡಲ ಅಧ್ಯಕ್ಷೆ  ಮೀನಾಕ್ಷಿ ದೇವದಾಸ್ ಮಾತನಾಡಿ ನೆಹರೂ ಯುವ ಕೇಂದ್ರದ  ನಿರಂತರ ಸಲಹೆ,ಸಹಕಾರ ಸ್ಮರಿಸಿದರು. ಹಾಗೂ ಮಹಿಳಾ ಮಂಡಲದ ಸುವರ್ಣ ಮಹೋತ್ಸವದ ಕುರಿತು ಮಾತನಾಡಿದರು. ಕುಳಾಯಿ  ಮಹಿಳಾ ಮಂಡಲದ  ಮೀರಾ ಮೋಹನ್, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ನೆಹರೂ ಯುವ ಕೇಂದ್ರ ಮಂಗಳೂರು ಇದರ ತಾಲೂಕು ಪ್ರತಿನಿಧಿ ನಾಗರಾಜ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ರಾಜೇಶ್ವರಿ  ದಿನಾಕರ್ ಕುಳಾಯಿ  ನಿರೂಪಿಸಿ,  ಪೂರ್ಣಿಮಾ ಸುಂದರ್ ವಂದಿಸಿದರು.