ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಕಳೆದ 62 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವವು ಸಾರ್ವಜನಿಕ ಹಬ್ಬದ ರೂಪದಲ್ಲಿ ಆಚರಿಸಲ್ಪಡುತ್ತಿದೆ. ಜಾತಿ ತಾರತಮ್ಯ ಇಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಗಣೇಶೋತ್ಸವ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಈ ವರ್ಷವೂ ನಡೆಸುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿರುವ 18 ಸಿಸಿಟಿವಿಗಳ ಮೂಲಕವಾಗಿ ಕಣ್ಣಗಾವಲಿನೊಂದಿಗೆ 17 ಟ್ಯಾಬ್ಲೋಗಳು ಉತ್ಸವದಲ್ಲಿ ಮನರಂಜಿಸಲಿದೆ. 

ಸಮಸ್ಯೆ ಇರುವ ತೀವ್ರ ತಿರುವಿನ ಪ್ರದೇಶಗಳಲ್ಲಿ ಕಾರ್ಯಕರ್ತರುಗಳನ್ನು ಹಾಗೂ ಪೊಲೀಸ್ ಸಹಕಾರದಲ್ಲಿ ಎಲ್ಲವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿರುತ್ತದೆ. ವಿವಾದಿತ ವೇಷಗಳೆಲ್ಲವನ್ನು ಬಹಳ ಹಿಂದೆಯೇ ನಿಷೇಧಿಸಿರುತ್ತೇವೆ. ಸಮಿತಿಯ ಎಲ್ಲಾ ಕಾರ್ಯಕರ್ತರು ಮೃತಾಚರಣೆಯಿಂದ ಸ್ವಯಂ ನಿರ್ಧಾರ ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬದ್ಧರಾಗಿದ್ದಾರೆ ಎಂದು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ನಾರಾಯಣ ಪಿ ಎಂ ಅವರು ನುಡಿದರು. 

ನಿಶ್ಮಿತಾ ಟವರ್ಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರ ಈ ವಿಷಯಗಳನ್ನು ಪ್ರಸ್ತುತಪಡಿಸಿದರು. ಪುರಸಭೆಯವರು ಪುರದ ದೀಪಾಲಂಕಾರವನ್ನು ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದರು. ಮಂಗಳವಾರ ಎಂಸಿಎಸ್ ಬ್ಯಾಂಕಿನಿಂದ ಗಣಪತಿಯ ಬೆಳ್ಳಿಯ ಎಲ್ಲಾ ಸಾಮಗ್ರಿಗಳು ಸಮಾಜ ಮಂದಿರಕ್ಕೆ ಆಗಮಿಸಲಿದೆ. ಬುಧವಾರ ಆಗಸ್ಟ್ 27ರಂದು ಬೆಳಗ್ಗೆ ವಿಜ್ರಂಭಣೆಯಲ್ಲಿ ಗಣೇಶ ಮೂರ್ತಿ ಸಮಾಜ ಮಂದಿರಕ್ಕೆ ಆಗಮಿಸಿ, ವೇದಮೂರ್ತಿ ಅಲಂಕಾರ ಈಶ್ವರ ಭಟ್ಟರಿಂದ ಪ್ರತಿಷ್ಠಾಪಿಸಲ್ಪಟ್ಟು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ದೀಪ ಬೆಳಗಿ ಗಣೇಶೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದರು. ಉಳಿದಂತೆ ಐದು ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಸ್ಕೃತಿಕ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದರು. 

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಕೊರಗಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಜಾರಾಮ್ ನಾಗರಕಟ್ಟೆ ಸ್ವಾಗತಿಸಿ ವಾಸ್ತವಿಕ ಮಾತು ಆಡಿ ವಂದಿಸಿದರು.