ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ, ಇನ್ನರ್ ವೀಲ್ ಕ್ಲಬ್, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ಎಂ ಸಿ ಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಆಧಾರ ನೋಂದಣಿ, ತಿದ್ದುಪಡಿ, ಆರೋಗ್ಯ ಮತ್ತು ಅಪಘಾತ ವಿಮಾ ಶಿಬಿರ ಉದ್ಘಾಟನೆ ಆಯಿತು. ದೀಪ ಬೆಳಗಿ ಉದ್ಘಾಟನೆಯನ್ನು ನೆರವೇರಿಸಿದ ಎಂಸಿಎಸ್ ಸೊಸೈಟಿಯ ಅಧ್ಯಕ್ಷ , ನ್ಯಾಯವಾದಿ ಬಾಹುಬಲಿ ಪ್ರಸಾದ್ ಅಧ್ಯಕ್ಷೀಯ ಭಾಷಣವನ್ನು ಮಾಡಿ ಸೊಸೈಟಿ ಸಾರ್ವಜನಿಕ ಉಪಯೋಗಕಾರಿ ಕೆಲಸಗಳಲ್ಲಿ ಮಂಚೂಣಿಯಲ್ಲಿದೆ. ಸೊಸೈಟಿಯ ನೌಕರಿರಿಗೆ ಆರೋಗ್ಯ ಮತ್ತು ಅಪಘಾತ ವಿಮೆಯ ಸೌಲಭ್ಯವನ್ನೂ ನೀಡುತ್ತಿದೆ. ಸದಸ್ಯರಿಗೂ ಕೂಡ ಅಂತಹ ಅವಕಾಶವನ್ನು ಮಾಡಿಕೊಟ್ಟಿದೆ ಎಂದರು . 


ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಅವರು ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು  ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 

ವೇದಿಕೆಯಲ್ಲಿ ಎಂಸಿಎಸ್ ಸೊಸೈಟಿಯ ಜಯರಾಮ ಕೋಟ್ಯಾನ್, ಪ್ರೇಮಾ ಸಾಲಿಯನ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ ಹಾಜರಿದ್ದರು. ನಿವೃತ್ತ ಪ್ರಾಂಶುಪಾಲ ಪದ್ಮನಾಭ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.