ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಾ ಕಾಲದಲ್ಲಿ ರಾಜ್ಯ ಸಭೆಯಲ್ಲಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅದು ಅಂಗೀಕಾರ ಆಗಿಲ್ಲ.

Image Courtesy: Deccan Herald

ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಎಂಬ ಮಾತೂ ಇದೆ. ಅದರ ನಡುವೆ ರಾಹುಲ್ ಗಾಂಧಿಯವರ ಒಬ್ಬರಿಗೆ ಒಂದು ಹುದ್ದೆ ಹೇಳಿಕೆಯಡಿ ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಲು ದಿಗ್ವಿಜಯ ಸಿಂಗ್ ಮತ್ತು ಪಿ. ಚಿದಂಬರಂ ತುದಿಗಾಲಲ್ಲಿ ನಿಂತಿದ್ದಾರೆ.

ಅಧೀರ್ ರಂಜನ್ ಚೌಧರಿಯವರು ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಇರುವುದರ ಜೊತೆಗೆ ಪಡುವಣ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಜೈರಾಂ ರಮೇಶ್ ಅವರು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕರಾಗಿರುವುದರ ಜೊತೆಗೆ ಪಕ್ಷದ ಸಂಪರ್ಕ ಸಂವಹನ ಕೋಶದ ಮುಖ್ಯಸ್ಥರಾಗಿಯೂ ಇದ್ದಾರೆ.