ರಸ್ತೆಯಲ್ಲಿ ಬೈಕ್ ಹಿಂದಿಕ್ಕಿದ ಎಂಬ ಕಾರಣಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ನಂಗಲಿ ಪೋಲೀಸರು ಮುನಿವೆಂಕಟಪ್ಪ ಎಂಬ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೈಕ್‌ ಹಿಂದಿಕ್ಕಿದ ಎಂದು ಬೇವಹಳ್ಳಿಯ ಉದಯಕಿರಣ್ ಎಂಬ ದಲಿತ ಯುವಕನ ಬೈಕ್ ಮೊಬಾಯಿಲನ್ನು ಮೇಲ್ಜಾತಿಯವರು ಕಿತ್ತುಕೊಂಡಿದ್ದಾರೆ. ಕೇಳಲು ಹೋದರೆ ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೆ ಆರೋಪಿಗಳು ತಮ್ಮ ಪೆತ್ತಾಂಡ್ಲ ಹಳ್ಳಿಯಿಂದ ಪರಾರಿಯಾಗಿದ್ದಾರೆ. ಪೋಲೀಸರು ಪರಾರಿಯಾಗಿರುವ ಇನ್ನೂ ಮೂವರು ಆರೋಪಿಗಳಾದ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪರಿಗೆ ಬಲೆ ಬೀಸಿ ಹುಡುಕುತ್ತಿದ್ದಾರೆ. ಸಿಪಿಎಂ, ಹಲವು ದಲಿತ ಸಂಘಟನೆಗಳು ಉದಯಕಿರಣ್ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲು ಒತ್ತಾಯಿಸಿದ ಅವರು ಆಪಾದಿತರನ್ನು ಬಂಧಿಸಿ ಗಡಿಪಾರು ಮಾಡಲು ಒತ್ತಾಯಿಸಿದರು.