ಸುಳ್ಯ:  ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ ಬೆಳಕಿನ ಕಿರಣಗಳೇ ಬಣ್ಣಿಸಿರಿ ಇರುಳ ಹಿಂದೆ ಬೆಳಕೊಂದ ತೋರಿಸಿರಿ ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ. ಮನಸ್ಸನ್ನು ಅರಳಿಸುವ ಕಲೆಗಳು ಎಲ್ಲೆಡೆ ಪ್ರಸರಿಸಬೇಕು, ಮಕ್ಕಳಿಗೆ ಮನಸ್ಸನ್ನು ಅರಳಿಸುವ ಕಲೆಯನ್ನು ಕಲಿಸಿ ಕಲೆಯನ್ನು ಆಸ್ವಾದಿಸುವ ಮನಸ್ಸು ಉಂಟಾದರೆ ಅದು ನಾಡಿನ ಶ್ರೇಯೋಭಿವೃದ್ಧಿಗೆ ಪ್ರೇರಣೆ ಯಾಗುತ್ತದೆ. ಯುವಕರಲ್ಲಿ ಕಲಾಸ್ವಾಧನೆ ಬೆಳೆಸಬೇಕು ಕಲಾರಾದನೆ ಎಂದರೆ ದೇವರ ಆರಾಧನೆ ಅದನ್ನು ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕರಾದ ಡಾ ಚೇತನರಾಧಕೃಷ್ಣ ಪಿಎಂ ದಂಪತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿಗಾಗಿ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಮೂರ್ಛೆ ಮುತ್ತಣ್ಣ ಗೌಡ ಮತ್ತು ನಳಿನಿ ಮುತ್ತಣ್ಣ ಸ್ಮರಣಾರ್ಥ ಮೇದಿನಿ ಉತ್ಸವ ನಡೆಯಿತು.

ಸುಳ್ಯ ತಾಲೂಕಿನ ಕನಕ ಮಜಲು ಮಾಣಿ ಮೈಸೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಎರಡು ದಿನ ಮಂಡ್ಯ ಹಾಗೂ ಮೈಸೂರಿನಲ್ಲಿ ಕಲಾಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿರುವ ಗುರುದೇವ ಲಲಿತ ನೃತ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ  ಆಯೋಜಿಸಿದ್ದು ತನ್ನ ವಿದ್ಯಾರ್ಥಿಗಳ ಜೊತೆ ಇತರ ವಿದ್ಯಾರ್ಥಿಗಳಿಗೂ ಅವಕಾಶ ನೀಡಿ ತಾನು ಬೆಳೆಯುತ್ತಿರುವ ಜೊತೆ ಇತರನ್ನು ಬೆಳೆಸುತ್ತಿರುವ ರೀತಿ ಎಲ್ಲರ ಪ್ರಸಂಶೆಗೆ ಪಾತ್ರವಾಯಿತು. ಕಲೆಯು ವ್ಯಕ್ತಿಯ ಸರ್ವ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಕಲೆಯನ್ನು ಕಲಿತವರು ಎಲ್ಲಿಯೂ ಸೋಲುವುದಿಲ್ಲ ಕೇರಳ, ಚೆನ್ನೈ ಅಸ್ಸಾಂ ,ವೆಸ್ಟ್ ಬೆಂಗಾಲ್, ಮಂಡ್ಯ ಮೈಸೂರ್ ಕುಶಾಲ್ನಗರ ಶಿವಮೊಗ್ಗ ,ಧಾರವಾಡ ಬೆಂಗಳೂರು ಮುಂತಾದ ಕಡೆಗಳಿಂದ ಕಲಾವಿದರು ಭಾಗವಹಿಸಿದರು. 

ವಿವಿಧ ಭರತನಾಟ್ಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಮೋಹಿನಿ ಅಟ್ಟಂ ,ಕುಚುಪುಡಿ ಏಕವ್ಯಕ್ತಿ ಭರತನಾಟ್ಯ , ಸಾಮೂಹಿಕ ಭರತನಾಟ್ಯಗಳು ಒಡೆಸ್ಸಿ ನೃತ್ಯ ,ಯುಗಗಳ ನೃತ್ಯ ಹೀಗೆ ನೃತ್ಯ ವೈವಿಧ್ಯ ವೈವಿಧ್ಯತೆಗಳು ಚಿತ್ರಕಲಾ ಪ್ರದರ್ಶನಗಳು ನೆರೆದ ಕಲಾಸಕ್ತರ ಮನಸೂರೆಗೊಂಡಿತು.ಮರಳು ಭೂಮಿಯಲ್ಲಿ ಹೂ ಅರಳುವಂತೆ ಇಲ್ಲಿ ಪ್ರಾರಂಭದಲ್ಲಿ ಯಾವುದೇ ಕಲೆಯ ಸೊಗಡು ಇಲ್ಲದೆ ರಾಧಾಕೃಷ್ಣ ಪಿಎಂ ಚೇತನಾಳನ್ನು ವಿವಾಹವಾದ ನಂತರ ಕಾರ್ಯಕ್ರಮಗಳು ಸದಾ ಜರಗುತ್ತಾ ರಸ್ತೆಯಲ್ಲಿ ವಾಹನಗಳಲ್ಲಿ ಸಾಗುತ್ತಿರುವವರು ಏನು ನಡೆಯುತ್ತಿದೆ ಎಂದು ಕುತೂಹಲದಿಂದ ವೀಕ್ಷಿಸಿ ಸುತ್ತ ಸಾಗುವ ದೃಶ್ಯ ಹಾಗೆ ಹೆಜ್ಜೆ ಗೆಜ್ಜೆಗಳ ನಾದ ನಿನಾದಗಳು ಕಲಾಸಕ್ತರನ್ನು ರಾಗ ಲಯ ನೃತ್ಯ ತಾಳದಲ್ಲಿ ತೇಲಾಡಿಸಿದರು ಹಾಗೆ ಸ್ಥಳೀಯರಿಗೆ ಮೃಷ್ಟಾನ್ನ ಕಲಾಸ್ವಾದನೆ ಪುಟ್ಟ ಪುಟ್ಟ ಮಕ್ಕಳ ನೃತ್ಯವನ್ನು ನೋಡಿದಾಗಂತೂ ಇದೆಲ್ಲ ನಮ್ಮ ಅಪೂರ್ವ ಮುತ್ತುಗಳು ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇವೆಲ್ಲ ಅಮೂಲ್ಯ ರತ್ನಗಳೆಂಬಂತೆ ಮನರಂಜನೆಯ ಪೂರ್ಣ ಕ್ಯಾಪ್ಟನ್ ಆಗಿದ್ದಾರೆ ಎಂದರೆ ಅತಿಶಯೋಕ್ತಿ ಏನಿಲ್ಲ

ಬರಹ :ಕುಮಾರ್ ಪೆರ್ನಾಜೆ