ಮೂಡುಬಿದಿರೆ: ಸೆವೆನ್ ಸಿಸ್ ಎಕ್ಸ್ ಫ್ಲೋ ರರ್ ಹಡಗು ಸುಮಾರು 686 ಜನ ಯಾತ್ರಿಕರಿದ್ದು ಹೆಚ್ಚಿನ ಪ್ರಯಾಣಿಕರು ಮುಖ್ಯವಾಗಿ ಅಮೇರಿಕಾ ಯೂರೋಪ್ ದೇಶ, ಕೊರಿಯಾ ದೇಶ ದವರು ಬಸದಿ ಸಂಧರ್ಶನ ಮಾಡಿದರು ಕೊರೊನಾ ಕಾರಣ ವಿದೇಶಿ ಯಾತ್ರಿಕರು ಕಳೆದ 2ವರ್ಷಗಳಿಂದ ಬಸದಿ ದರ್ಶನಕ್ಕೆ ಬರುದು ನಿಂತು ಹೋಗಿತ್ತು.
ಜಗಪ್ರಸಿದ್ದ ಸಾವಿರ ಕಂಬ ಬಸದಿ ಅಧ್ಯಾತ್ಮದ ಶಾಂತಿಯ ಕೇಂದ್ರವಾಗಿದ್ದು ಜೈನರ ಆರಾಧನ ಕೇಂದ್ರ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಹಾಗೂ ಎಲ್ಲಾ ಸಮುದಾಯದ ವರು ಭೇಟಿ ನೀಡುತ್ತಿರುದು ಈ ಬಸದಿಯ ವಿಶೇಷ ವೈವಿಧ್ಯಮಯ ಶಿಲಾ ಕಾಷ್ಠ ಶಿಲ್ಪದ ಕಲಾ ಆಗರ ವಾಗಿದ್ದು ಬಿನ್ನಾಣದ ಬಸದಿ ಎಂದು ಕಲಾ ರಸಿಕರಿಂದ ಪ್ರಶಂಸೆಗೆ ಒಳಗಾದ 1430 ರಲ್ಲಿ ನಿರ್ಮಾಣಗೊಂಡ ಜೈನ ಶ್ರದ್ದಾ ಕೇಂದ್ರವಾಗಿದ್ದು ದಿನಂಪ್ರತಿ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.
ಇಲ್ಲಿಯ ಬಸದಿ ವಾಸ್ತು ರಚನೆ ಶಾಂತಿಯ ವಾತಾವರಣ ಭಗವಾನ್ ಚಂದ್ರ ನಾಥ ಸ್ವಾಮಿ ಸುವರ್ಣ ವರ್ಣದ ಸುಂದರ ಬಿಂಬ ನೋಡಿ ವಿಸ್ಮಿತ ರಾದ ವಿದೇಶಿ ಗರು ಬಸದಿ ಸುತ್ತ ಪ್ರದಕ್ಷಿಣೆ ಬಂದು ಭೈರಾ ದೇವಿ ಮಂಟಪ ದ ಕಲೆ ಕೆತ್ತನೆ ಕುಸುರಿ ವಿವಿಧ ಮಾನವ ಲೋಕ ದ ಜೀವನ ವೈವಿಧ್ಯ ಪಶು ಪಕ್ಷಿ ಪ್ರಾಣಿ ಜಗತ್ತು ನೃತ್ಯ ಯೋಗ ಮಲ್ಲ ಕಂಬ ಧ್ಯಾನ, ಯುದ್ಧ ದೃಶ್ಯಗಳನ್ನು ಕಣ್ತುಂಬ ನೋಡಿ ಸಂತೋಷ ಪಟ್ಟರು ನಾಮ ಫಲಕದಲ್ಲಿ ಮುದ್ರಿಸಿದ ಚರಿತ್ರೆ ಓದಿ ತಿಳಿದರು ಈ ಸಂಧರ್ಭ ಮೂಡುಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ವಿದೇಶಿ ಯಾತ್ರೀಕರ ಬಸದಿ ಸಂಬಂಧ ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಚಾರಿತ್ರಿಕ ಮಾಹಿತಿ ನೀಡಿದರು ಲಿಯಾ ಟ್ರಾವೆಲ್ ನ ಮಾಹಿತಿದಾರರು, ಮಂಡ್ಯ ಮೂಡುಬಿದಿರೆ ಮಂಗಳೂರು ಪರಿಸರದ ವಿವಿಧ ಶಾಲೆಗಳ ಶಾಲಾಪ್ರವಾಸಕ್ಕಾಗಿ ಬಂದ ವಿದ್ಯಾರ್ಥಿಗಳು ಜತೆಗಿದ್ದರು ಸ್ವಾಮೀಜಿ ಸರ್ವರಿಗೂ ಹರಸಿ ಆಶೀರ್ವದಿಸಿದರು ಶ್ರೀಮಠ ಹಾಗೂ ಬಸದಿ ಶಿಬ್ಬಂದಿಗಳಾದ ಸುಧಾಕರ್,ಸೂರಜ್ ಪಣಿರಾಜ್, ಶ್ರೀನಾಥ್, ರಾಮ್ ಸಿಂಗ್ ಸಹಕರಿಸಿದರು.
ಚಿತ್ರ ಮತ್ತು ವರದಿ: Rons Bantwal