ಮಂಗಳೂರು:- ಬೆಂಗಳೂರಿನ ಆರ್ಟ್ಸ್ ಆಂಡ್ ಕಲ್ಚರಲ್ ಫೌಂಡೇಶನ್ ನವರು ಮಾರ್ಚ್ 28ರಂದು ಮಧ್ಯಾಹ್ನ ಮಂಗಳೂರಿನ ಟೌನ್ ಹಾಲಿನಲ್ಲಿ ಶ್ರೀರಾಮ ನೃತ್ಯ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಶ್ರೀವತ್ಸ ಶಾಂಡಿಲ್ಯರವರು ನಾನಾ ಲಲಿತ ಕಲೆ ಮತ್ತು ಪ್ರದರ್ಶನಕ್ಕೆ ಮೇಲಿನ ಸಂಸ್ಥೆಯನ್ನು ಕಟ್ಟಿ ಮುನ್ನಡೆಸಿದ್ದಾರೆ.

ಮಂಗಳೂರಿನ ನೃತ್ಯ ನಮನದಲ್ಲಿ ಎಂಟು ಪ್ರಸಿದ್ಧ ನೃತ್ಯ ‌ತಂಡಗಳು ರಾಮಾಯಣದ ಮೇಲೆ ಎಂಟು ಸನ್ನಿವೇಶಗಳ ನೃತ್ಯ ಪ್ರದರ್ಶನ ‌ನೀಡುವರು. ಈ ಎಲ್ಲ ಕುಣಿ ನಲಿ  ಕೂಟಗಳು ಸ್ಥಳೀಯವಾಗಿದ್ದು ಹಾಡುಗಾರಿಕೆಗೂ ಅವಕಾಶವನ್ನು ಪಡೆದಿವೆ. ನೂರಕ್ಕೂ ಹೆಚ್ಚು ಜನ ನರ್ತನಕಾರರು ಹಾಗೂ ಹಾಡುಗಾರರು ಇದರಲ್ಲಿ ರಾಮ‌ ಚಿಂತನೆ ಮಾಡುವರು. ಕೋವಿಡ್ 19 ಮಾರ್ಗಸೂಚಿ ಅನುಸರಿಸಲಾಗಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.