"ಸಮಸ್ಯೆ ಇರುವ ಮಗುವನ್ನು ಹೆರಬಾರದು ಎಂಬ ತಾಯಿಯ ತೀರ್ಮಾನ ವಿರೋಧಿಸುವುದು ಆಕೆಯ ಹಕ್ಕು ಕಸಿದಂತೆ. ಮಕ್ಕಳು ತಮ್ಮ ಮತ್ತು ಮಗುವಿನ ಆರೋಗ್ಯದ ಬಗೆಗೆ ಚೆನ್ನಾಗಿಯೆ ತಿಳಿದಿರುತ್ತಾರೆ. ಗರ್ಭಪಾತ ಮೊದಲು ಆಕೆಯ ತೀರ್ಮಾನ, ವೈದ್ಯಕೀಯ ಮಂಡಳಿಯದಲ್ಲ" ಎಂದು ಬಾಂಬೆ ಹೈಕೋರ್ಟ್ ಪೀಠ ತೀರ್ಪು ನೀಡಿತು.
Image credit: India Today
ಸೋನೋಗ್ರಪಿ ಪರೀಕ್ಷೆಯಲ್ಲಿ ಭ್ರೂಣ ಸಮಸ್ಯೆಯದಿದೆ. ಹುಟ್ಟುವ ಮಗು ವಿಕಲಾಂಗ, ಬುದ್ಧಿಮಾಂದ್ಯತೆ ಹೊಂದಿರುತ್ತದೆ. ಈ ಕಾರಣಕ್ಕೆ ಮಹಿಳೆ ಗರ್ಭಪಾತ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಸ್ಟಿಸ್ಗಳಾದ ಗೌತಂ ಪಟೇಲ್ ಮತ್ತು ಎಸ್. ಜಿ. ದಿಗೆ ಅವರು "ನೈತಿಕತೆಯ ಪ್ರಶ್ನೆ ಎತ್ತುತ್ತೀರಿ. ಮಗು ಸಮಸ್ಯೆಯೊಡನೆಯೇ ಹುಟ್ಟುವುದಾದರೆ ಅದರ ಬೆಳವಣಿಗೆಯ ನೈತಿಕತೆ ಯಾರದು?" ಎಂದು ಪ್ರಶ್ನಿಸಿದರು.
ತಂದೆ ಮಗು ಬೇಕು ಎಂದು ವೈದ್ಯಕೀಯ ಮಂಡಳಿಗೆ ಅರ್ಜಿ ಹಾಕಿದ್ದ. ವೈದ್ಯಕೀಯ ಮಂಡಳಿ ಅದಕ್ಕೆ ಆದ್ಯತೆ ನೀಡಿತ್ತು. ಆಕೆಯದೇ ಅಂತಿಮ ನಿರ್ಧಾರ ಎಂದು ಕೋರ್ಟು ತೀರ್ಪಿತ್ತಿತು.