ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಗಂಡಸರ ಹಾಕಿ ತಂಡವು ಆ ಭರವಸೆಯನ್ನು ಹುಸಿ ಮಾಡಿ ಒಡಿಶಾದ ಭುಬನೇಶ್ವರದಲ್ಲಿ ನಡೆದ ವಿಶ್ವ ಕಪ್ ಹಾಕಿಯಲ್ಲಿ ಎಂಟರ ಘಟ್ಟ ಕೂಡ ಮುಟ್ಟದೆ ಮನೆಗೆ ಮೂಟೆ ಕಟ್ಟಿತು.

Image Credit: India Today

2016ರಲ್ಲಿ ಇದೇ ಭುಬನೇಶ್ವರದಲ್ಲಿ ನಡೆದಿದ್ದ ವಿಶ್ವ ಕಪ್ ಹಾಕಿಯಲ್ಲಿ ಭಾರತ ಕ್ವಾರ್ಟರ್ ಫೈನಲ್ ಆದರೂ ಮುಟ್ಟಿತ್ತು. ಈ ಬಾರಿ ಅದಕ್ಕೆ ಮೊದಲೇ ಕ್ರಾಸ್ ಓವರ್‌ನಲ್ಲೇ ಸೋತು ಮನೆಗೆ ನಡೆಯಿತು.

ಗೆದ್ದ ನ್ಯೂಜಿಲ್ಯಾಂಡ್ ಮತ್ತು ಸೋತ ಭಾರತ ತಂಡದ ಗೋಲ್ ಕೀಪರ್‌ಗಳಾದ ಹೇವಾರ್ಡ್ ಲಿಯಾನ್ ಮತ್ತು ಕೃಷ್ಣ ಬಹದ್ದೂರ್ ಅವರು ಅದ್ಭುತವಾಗಿ ಫಾರ್ವರ್ಡ್‌ಗಳಿಗೆ ಬೆವರಿಳಿಸಿದರು. 

ಪಂದ್ಯ 3-3 ಗೋಲುಗಳಿಂದ ಸಮ ಆಯಿತು. ಹೆಚ್ಚುವರಿ ಐದೈದು ಒದೆಗಳನ್ನು ಇಬ್ಬರೂ ಗೋಲು ಕೀಪರ್‌ಗಳು ಅದ್ಭುತವಾಗಿ ನಿಬಾಯಿಸಿದರು. ಮತ್ತೂ ಹೆಚ್ಚುವರಿಯಲ್ಲಿ ನ್ಯೂಜಿಲ್ಯಾಂಡ್ 5-4 ಗೋಲುಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು.