ಬ್ರೆಜಿಲ್‌ನ ಕಕ್ಸಿಯನ್‌ನಲ್ಲಿ ನಡೆದ ಕಿವುಡರಿಗೆ ನಡೆದ ಡೆಫ್‌ಲಿಂಪಿಕ್ಸ್‌ನಲ್ಲಿ ಭಾರತದ ದೀಕ್ಷಾ ದಾಗರ್ ಅವರು ಚಿನ್ನದ ಪದಕ ಗೆದ್ದರು. ಆ ಮೂಲಕ ಡೆಫ್‌ಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲಿಗರಾದರು ದೀಕ್ಷಾ.
2017ರಲ್ಲಿ ಟರ್ಕಿಯಲ್ಲಿ ನಡೆದ ಡೆಫ್‌ಲಿಂಪಿಕ್ಸ್‌ನಲ್ಲಿ ದೀಕ್ಷಾ ಬೆಳ್ಳಿ ಗೆದ್ದಿದ್ದರು. ಅಲ್ಲಿ ಹೇಳಿದಂತೆ ಈಗ ಚಿನ್ನ ಗೆದ್ದಿದ್ದಾರೆ. ಯುಎಸ್‌ಎಯ ಪ್ರಬಲ ಎದುರಾಳಿ ಆ್ಯಸ್ಲಿನ್ ಗ್ರೇಸ್‌ರನ್ನು ಸೋಲಿಸಿ ದೀಕ್ಷಾ ಬಂಗಾರ ಪಡೆದರು.